ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆ ಮಕ್ಕಳ ತಜ್ಞ ಡಾ. ಸುನೀಲ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಎ 1 ಆರೋಪಿ ವಿಜಯಕುಮಾರ್ ನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ವಿಜಯ್ ಕುಮಾರ್ ಬಂಧಿತ ಎ1 ಆರೋಪಿ. ಕಳೆದ ಜ.25 ರಂದು ವೈದ್ಯರನ್ನು ಕಿಡ್ನಾಪ್ ಮಾಡಿದ್ದ ಒಟ್ಟು 8 ಆರೋಪಿಗಳ ಪೈಕಿ ಎ2 ನಿಂದ ಎ8 ವರೆಗೆ ಒಟ್ಟು ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ಎ1 ಆರೋಪಿ ವಿಜಯಕುಮಾರ್ ತಲೆಮರೆಸಿಕೊಂಡಿದ್ದನು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ವಿಜಯಕುಮಾರ್ ನನ್ನು ಸಹ ಪತ್ತೆಹಚ್ವುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಜ.31 ರಂದು ಶುಕ್ರವಾರ ರಾತ್ರಿ 8 ಗಂಟೆಗೆ ಇಲ್ಲಿನ ಪಾರ್ವತಿನಗರದಲ್ಲಿ ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ ಪಿ ಡಾ. ಶೋಬಾರಾಣಿ ವಿ.ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==