ಶಾಲೆಗೊಂದು ಮಕ್ಕಳ ಹಕ್ಕುಗಳ ಕೂಟ ಇರಲಿ: ರಾಜ್ಯ ಆಯೋಗದ ಸದಸ್ಯ ಎಚ್.ಸಿ ರಾಘವೇಂದ್ರ ಹೇಳಿಕೆ

Ballari Childrens Rights Training
ಬಳ್ಳಾರಿ ಎಂ.ಎ.ಕೆ.ಆಜಾದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ ರಾಘವೇಂದ್ರ ಉದ್ಘಾಟಿಸಿದರು.
Published on

ಬಳ್ಳಾರಿ: ಪ್ರತಿ ಶಾಲೆ ಮಕ್ಕಳ ಹಕ್ಕುಗಳ ಕೂಟ ಹೊಂದಿರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ ರಾಘವೇಂದ್ರ ಹೇಳಿದರು.

ನಗರದ ಎಂ.ಎ.ಕೆ.ಆಜಾದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಡಾನ್‌ಬಾಸ್ಕೋ ಸಂಸ್ಥೆ ಕ್ರೀಮ್ ಯೋಜನೆ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಮಕ್ಕಳು ಅವರ ಹಕ್ಕುಗಳು ಪ್ರತಿಪಾದನೆಗಾಗಿ ಕೂಟ ರಚನೆ ಅಗತ್ಯವಿದೆ. ಇದರ ಸೂತ್ರಧಾರರು, ಪಾತ್ರಧಾರಿಗಳು ಮಕ್ಕಳಾಗಿರುತ್ತಾರೆ. ಪ್ರತಿ ಶಾಲೆ, ಗ್ರಾಪಂನಲ್ಲಿ ಮಕ್ಕಳ ಕೂಟ ಇರಬೇಕು. ಇದು ಕ್ರೀಮ್ ಯೋಜನೆಯ ಉದ್ದೇಶವಾಗಿದೆ ಎಂದರು.

ಸರ್ವಶಿಕ್ಷಣ ಅಭಿಯಾನ ಸಹಾಯಕ ಸಂಯೋಜಕ ಶಿವಲಿಂಗರೆಡ್ಡಿ ಮಾತನಾಡಿ, ದೇಶದಲ್ಲಿ ಮಕ್ಕಳ ಸಂಖ್ಯೆ ಶೇ.42 ಇದೆ. ಆದರೆ ಮಕ್ಕಳನ್ನು ಮತ್ತು ಅವರ ಭಾವನೆಗಳನ್ನು ಸಾಮಾನ್ಯವಾಗಿ ಹಿರಿಯರು ಗಣನೆಗೆ ತೆಗೆದುಕೊಳ್ಳುವುದೇ ಕಡಿಮೆ. ಮಕ್ಕಳು ಮುಕ್ತ ವಾತಾವರಣದಲ್ಲಿ ಬೆಳೆಯಬೇಕು. ಯಾವುದೇ ತಾರತಮ್ಯಕ್ಕೆ ಒಳಗಾಗಬಾರದು. ಎಲ್ಲರಿಗೂ ಒಂದೇ ರೀತಿಯ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವು ಕ್ರಿಯಾಶೀಲ ಮತ್ತು ವಿಭಿನ್ನ ಕಾರ್ಯ ಚಟುವಟಿಕೆಗಳು ನಡೆಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net