ದೇಶದಲ್ಲಿಯೇ ರಾಜ್ಯ ಸರ್ಕಾರ ಮಾದರಿ

Published on

ಬಳ್ಳಾರಿ ; ಗ್ಯಾರಂಟಿ ಯೋಜನೆಗಳ ಜತೆ ಅಭಿವೃದ್ಧಿ ಕಾಮಗಾರಿಗಳಿಗೂ ಒತ್ತು ನೀಡುವ ಮೂಲಕ ರಾಜ್ಯ ಸರ್ಕಾರ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.

ತಾಪಂ ಕಚೇರಿ ಆವರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನ ದ್ವಿಚಕ್ರ ವಾಹನ ವಿತರಣೆ ಯೋಜನೆಯಡಿ ಆಯ್ಕೆಯಾದ 150 ಫಲಾನುಭವಿಗಳಿಗೆ ದ್ವಿಚಕ್ರ ವಿತರಿಸಿ ಮಾತನಾಡಿದರು. ಗ್ಯಾರಂಟಿಗಳಿಗಾಗಿ ವಾರ್ಷಿಕವಾಗಿ ಸುಮಾರು 62 ಸಾವಿರ ಕೋಟಿ ರೂ. ಅನುದಾನ ಜನರಿಗೆ ನೀಡಲಾಗುತ್ತಿದೆ. ಜನರೇ ಮೆಚ್ಚಿ ಹೊಗಳುವಂತಹ ಕೆಲಸಕ್ಕೆ ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶ ಕಾರ್ಯಕ್ರಮವೇ ಸಾಕ್ಷಿಯಾಗಿತ್ತು. ಎಲ್ಲ ವರ್ಗದವರನ್ನು ಮುನ್ನಲೆಗೆ ತರುವಂತಹ ಕೆಲಸ ಸರ್ಕಾರ ಮಾಡುತ್ತಿದೆ. ಮನೆ -ಮನೆಗೂ ಪೊಲೀಸ್ ಅಭಿಯಾನ ಜಿಲ್ಲೆಯಲ್ಲಿಯೂ ಸಹ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net