ನೋವು‌ ನಲಿವುಗಳಿಗೆ ಸಾಹಿತ್ಯ ಚಿರಸ್ಪಂದನೆ

Published on

‌ಬಳ್ಳಾರಿ : ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಸಾಹಿತ್ಯ ತನ್ನ ಚಿರಂತನತೆಯನ್ನು ಕಾಯ್ದುಕೊಳ್ಳಲು ಸಾಧ್ಯವೆಂದು ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ವೈ. ಸಿ. ಯೋಗಾನಂದ ರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಘಟಕ ಹಾಗೂ ಜುನೇದ್ ಪ್ರಕಾಶನ ಸಹಯೋಗದೊಂದಿಗೆ ಪ್ರೊ. ದಸ್ತಗೀರ್ ಸಾಬ್ ದಿನ್ನಿ ಅವರ "ಮಧುಬಟ್ಟಲಿನ ಗುಟುಕು" ಗಜಲ್ ಸಂಕಲನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ಪುಸ್ತಕಗಳನ್ನು ಕೊಂಡು ಓದುವ ಮೂಲಕ ಪುಸ್ತಕ ಸಂಸ್ಕ್ರತಿಯನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.

ಸಾಹಿತಿ ಸಿದ್ದರಾಮ ಕಲ್ಮಠ ಮಾತನಾಡಿ, ತೋಚಿದ್ದೆಲ್ಲಾ ಗೀಚಿದರೆ ಗಜಲ್ ಆಗುವುದಿಲ್ಲ. ಗಜಲ್ ಗಳ‌ ರಚನಕಾರ ಕಾವ್ಯ ರಚನೆಯಲ್ಲಿ ತನ್ನನ್ನು ತಾನು ಒಳಗೊಳ್ಳುವಿಕೆ, ಕೌಶಲ ಮತ್ತು ಅನುಭಾವವನ್ನು ಒಳಗೊಂಡಿರುತ್ತದೆ. ಗಜಲ್ ರಚನೆಗೆ ತನ್ನದೆಯಾದ ಕಾವ್ಯದ ಶಿಸ್ತಿದೆ ಎಂದು ಹೇಳಿದರು.

ಪ್ರೊ. ದಸ್ತಗೀರ್ ಸಾಬ್ ದಿನ್ನಿ ಮಾತನಾಡಿ, ಆತ್ಮ ತೃಪ್ತಿಗಾಗಿ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡ ನನಗೆ ನನ್ನ ಹೊಸ ಸಂಕಲನ ಲೋಕಾರ್ಪಣೆ ಸಂತಸ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net