ಸಂಭ್ರಮದ ನಾಗರ ಪಂಚಮಿ

Published on

ಬಳ್ಳಾರಿ ; ನಗರ ಹಾಗೂ ಜಿಲ್ಲಾದ್ಯಂತ ಎಲ್ಲ ಗ್ರಾಮೀಣ ಪ್ರದೇಶದಲ್ಲಿ ನಾಗರಪಂಚಮಿಯ ಸಡಗರ ಸಂಭ್ರಮ ಸೋಮವಾರ ಮನೆ ಮಾಡಿತ್ತು.

ದೇವಸ್ಥಾನದ ಆವರಣದಲ್ಲಿದ್ದ ಕಲ್ಲು ನಾಗರ ಮೂರ್ತಿಗಳಿಗೆ ಮತ್ತು ಜಮೀನುಗಳಲ್ಲಿನ ಹುತ್ತಗಳಲ್ಲಿ ಹಾಲೆರೆದು ಭಕ್ತಿಭಾವ ಮೆರೆದರು.

ಶೇಂಗಾ, ಪುಟಾಣಿ, ಎಳ್ಳು ಉಂಡೆಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿದರು. ಶ್ರಾವಣ ಮಾಸದ ಮೊದಲ ಹಬ್ಬವನ್ನು ಮಹಿಳೆಯರು ತಮ್ಮ ಮನೆಗಳ ಮುಂದೆ ವಿವಿಧ ವರ್ಣಗಳ ರಂಗೋಲಿಗಳನ್ನು ಹಾಕಿ ಹಬ್ಬವನ್ನು ಸ್ವಾಗತಿಸಿದರು. ಚಿಣ್ಣರು ಜತೆ ಹಿರಿಯರು ಪಾಲ್ಗೂಂಡು ಹಬ್ಬ ಸಂಭ್ರಮಿಸಿದರು. ಗ್ರಾಮದ ಹೊರವದಲ್ಲಿನ ಮರಗಳಿಗೆ ಜೋಕಾಲಿ ಕಟ್ಟಿ ಕೊಬ್ಬರಿ ಸರಗಳನ್ನು ಹರಿಯುವ ಸ್ಪರ್ಧೆಗಳು ನಡೆದವು. ಗ್ರಾಮೀಣ ಪ್ರದೇಶದಲ್ಲಿರುವ ವಿವಿಧ ದೇವಸ್ಥಾನಗಳ ಅಂಗಳದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ರೈತರು

ನಗರದ ಕನಕದುರ್ಗಮ್ಮ, ಸಣ್ಣ ದುರುಗಮ್ಮ, ಹುಲಿಗೆಮ್ಮ, ಮಾರೆಮ್ಮ, ಎಲ್ಲಮ್ಮ, ಏಳು ಮಕ್ಕಳ ಮಲೆಮ್ಮ ದೇವಸ್ಥಾನ, ರಾಘವೇಂದ್ರ ಸ್ವಾಮಿ ಮಠ ಸೇರಿದಂತೆ ವಿವಿಧ ದೇವಸ್ಥಾನಗಳ ಆವರಣಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು. ನವ ಜೋಡಿ ದಂಪತಿಯೂ ಕುಟುಂಬ ಸಮೇತ ದೇವಸ್ಥಾನಗಳಿಗೆ ಭೇಟಿ ನೀಡಿ ಭಕ್ತಿಯಿಂದ ಹಾಲೆರೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net