ಬಳ್ಳಾರಿ ಜಿಲ್ಲಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮ, ಗಮನ ಸೆಳೆದ ಪೊಲೀಸರು, ಗೃಹರಕ್ಷಕ ದಳ, ಮಕ್ಕಳ ಪಥಸಂಚಲನ

26012020 Bellary 71st Republic Day
Published on

ಬಳ್ಳಾರಿ: ನಗರ ಸೇರಿ ಜಿಲ್ಲಾದ್ಯಂತ ಭಾನುವಾರ 71ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಲಕ್ಷ್ಮಣ ಸವದಿ, ಡಾ.ಎಸ್.ರಾಧಾಕೃಷ್ಣನ್ ಅವರು ಹೇಳಿದಂತೆ ಪ್ರಜಾಪ್ರಭುತ್ವ ಪದ್ಧತಿ ಎನ್ನುವುದು ಸರ್ಕಾರದ ಒಂದು ವಿಧಾನ ಮಾತ್ರವಲ್ಲ. ಅದು ಜೀವನದ ಒಂದು ವಿಧಾನವೂ ಹೌದು ಹಾಗೂ ವ್ಯಕ್ತಿ ಸ್ವಾತಂತ್ರ್ಯ, ಗೌರವಗಳಲ್ಲಿ ಇಟ್ಟ ನಂಬಿಕೆಯಾಗಿದೆ ಎಂದರು. ಇದಕ್ಕೂ ಮುನ್ನ ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಬೃಹತ್ ಧ್ವಜಸ್ಥಂಭದ 150ಅಡಿ ಧ್ವಜಾರೋಹಣ ನೆರವೇರಿಸಿದರು. ಸಂಸದ ವೈ. ದೇವೇಂದ್ರಪ್ಪ, ಶಾಸಕ ಸೋಮಶೇಖರ ರೆಡ್ಡಿ ಇತರರಿದ್ದರು.

ವಾರ್ತಾ ಇಲಾಖೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಇಲಾಖೆ ಅಧೀಕ್ಷಕ ಗುರುರಾಜ್, ಸಿಬ್ಬಂದಿಗಳಾದ ಗುರುನಾಥ, ಹನುಮಂತ, ಮಲ್ಲೇಶಪ್ಪ, ಜಿ.ಹನುಮಂತಪ್ಪ, ರೋಜ್ ಮೇರಿ, ಮಂಜುನಾಥ ಮಣಿಗಲ್, ಬಾದಾಮಿ ರಾಧಾಕೃಷ್ಣ, ಶಾಂತಾಬಾಯಿ, ಶ್ರೀಧರ್ ಕವಾಲಿ, ಪತ್ರಕರ್ತರಾದ ನರಸಿಂಹಮೂರ್ತಿ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಸುರೇಶ ಚವ್ಹಾಣ, ಗಿರೀಶಗೌಡ, ರವಿ, ವೀರೇಶ ಕಟ್ಟಿಮ್ಯಾಗಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net