ರೆಡ್ಡಿ ಜನಸಂಘದಿಂದ ಕೇರ್ ಸೆಂಟರ್; ಶಾಸಕ ಸೋಮಶೇಖರ ರೆಡ್ಡಿ ಮಾಹಿತಿ

G Somashekhar Reddy
Published on


ಬಳ್ಳಾರಿ: ಕರೊನಾ ಸೋಂಕಿತರಿಗಾಗಿ ನಗರದ ತಾಳೂರು ರಸ್ತೆಯಲ್ಲಿರುವ ನಾರಾಯಣಮ್ಮ ಗೋವಿಂದ ಕಲ್ಯಾಣ ಮಂಟಪದಲ್ಲಿ ರೆಡ್ಡಿ ಜನ ಸಂಘದಿಂದ ಮೇ 24ರಂದು 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ಕರೊನಾದಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ನಿತ್ರಾಣಗೊಂಡಿವೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಸೋಂಕಿತರ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದರ ಜತೆಗೆ ಸೂಕ್ತ ಚಿಕಿತ್ಸೆ ದೊರಕದೆ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಬೆಡ್ ಸಿಗುತ್ತಿಲ್ಲ. ಅಂತಹ ಸೋಂಕಿತರ ಅನುಕೂಲಕ್ಕಾಗಿ ರೆಡ್ಡಿ ಜನ ಸಂಘದಿಂದ ಕೋವಿಡ್ ಕೇರ್ ತೆರೆಯಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಚಿತವಾಗಿ ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕೆಂದು ಆಲೋಚಿಸಿದ್ದೆವು. ಆದರೆ, ಎಲ್ಲವನ್ನೂ ಉಚಿತವಾಗಿ ಕೊಟ್ಟರೆ ಅದಕ್ಕೊಂದು ಮೌಲ್ಯವಿರುವುದಿಲ್ಲವೆಂದು ದಿನಕ್ಕೆ 3500 ರೂ.ನಿಗದಿ ಮಾಡಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಮೇ 24 ರಂದು ಸಚಿವ ಆನಂದ ಸಿಂಗ್ ಉದ್ಘಾಟಿಸಲಿದ್ದಾರೆ. ಸಮುದಾಯದ ವಿವಿಧ ಶ್ರೀಗಳು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net