ಬಳ್ಳಾರಿ : ಸಂಡೂರು ವಿಧಾನಸಭಾ ಉಪಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳಲ್ಲಿ ಓರ್ವ ಅಭ್ಯರ್ಥಿಯು ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದು, ಅಂತಿಮ ಕಣದಲ್ಲಿ 06 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಉಪಚುನಾವಣಾಧಿಕಾರಿ ಎಚ್.ಡಿ. ರಾಜೇಶ್ ತಿಳಿಸಿದ್ದಾರೆ. ಅ.18 ರಿಂದ 25 ರವರೆಗೆ ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಒಟ್ಟು 07 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅ.28 ರಂದು ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 07 ಅಭ್ಯರ್ಥಿಗಳ ನಾಮಪತ್ರಗಳು ಕ್ರಮವಾಗಿದ್ದವು. ಸ್ವತಂತ್ರ ಅಭ್ಯರ್ಥಿ ಬಂಗಾರಿ ಅನಿಲ್ ಕುಮಾರ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಅಂತಿಮ ಕಣದಲ್ಲಿ 06 ಅಭ್ಯರ್ಥಿಗಳು: ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ, ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್. ಅಂಜಿನಪ್ಪ, ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಂ.ಮಾರುತಿ, ಟಿ.ಎರ‌್ರಿಸ್ವಾಮಿ, ಎನ್.ವೆಂಕಣ್ಣ ಅಂತಿಮ ಕಣದಲ್ಲಿ ಇದ್ದಾರೆ.
=====