ಸಾಧನೆಯ ಹಾದಿಯತ್ತು ಶ್ರಮಿಸಿ

Published on

ಬಳ್ಳಾರಿ : ಸಾಧಿಸಬಲ್ಲ ತಾಕತ್ತು ಇರುವುದು ಭಾರತೀಯರಿಗೆ ಮಾತ್ರ. ಸಾಧನೆಯ ಹಾದಿಯತ್ತ ಕ್ರಮಿಸಿ, ನಿರಂತರ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಂಡರೆ ಸಾಧನೆಯ ಜಗತ್ತೇ ನಿಮ್ಮದಾಗುತ್ತದೆ ಎಂದು ಗದುಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ಇಲ್ಲಿನ ರಾಘವ ಕಲಾಮಂದಿರದಲ್ಲಿ ರಂಗತೋರಣ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ವಿವೇಕ ತೋರಣ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯರು ಸಿಂಹದ ಮರಿಗಳು. ಆದರೆ, ಇವರಿಗೆ ತಮ್ಮ ಶಕ್ತಿ ಬಗ್ಗೆ ತಮಗೇ ಅರಿವಿಲ್ಲ. ಹೀಗಾಗಿಯೇ ಕುರಿಮರಿಗಳಂತೆ ಬದುಕುತ್ತಿದ್ದಾರೆ. ಭಾರತೀಯರ ಶಕ್ತಿ ಹಾಗೂ ತಾಕತ್ತು ಸ್ವಾಮಿ ವಿವೇಕಾನಂದರಿಗೆ ತಿಳಿದಿತ್ತು. ಭಾರತೀಯರ ಆಧ್ಯಾತ್ಮಿಕ ಶಕ್ತಿಯ ಅವರಿಗೆ ಮನವರಿಕೆಯಿತ್ತು. ಹೀಗಾಗಿಯೇ ದೇಶಾದ್ಯಂತ ಸಂಚಾರ ಮಾಡಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಿದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net