ವಿಎಸ್‌ಕೆ ವಿವಿಗೆ ಅನಂತ್ ಹಂಗಾಮಿ ಕುಲಪತಿ

Vsk vv Vc Ananth
ಬಳ್ಳಾರಿ ವಿಎಸ್‌ಕೆ ವಿವಿಯಲ್ಲಿ ನೂತನ ಕುಲಪತಿ ಪ್ರೊ.ಅನಂತ್ ಎಲ್.ಝಂಡೇಕರ್ ಅವರಿಗೆ ನಿಕಟಪೂರ್ವ ಕುಲಪತಿ ಪ್ರೊ.ಸಾಹೇಬ್ ಅಲಿ ನಿರಗುಡಿ ಅಧಿಕಾರ ಹಸ್ತಾಂತರಿಸಿದರು.
Published on

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಹಂಗಾಮಿ ಕುಲಪತಿಯಾಗಿ ಸಮಾಜ ವಿಜ್ಞಾನ ನಿಕಾಯದ ಡೀನ್ ಮತ್ತು ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಪ್ರೊ.ಅನಂತ್ ಎಲ್.ಝಂಡೇಕರ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ನಿಕಟಪೂರ್ವ ಹಂಗಾಮಿ ಕುಲಪತಿ ಡಾ.ಸಾಹೇಬ್ ಅಲಿ ಎಚ್. ನಿರಗುಡಿ ಅವರು ಗುರುವಾರ ಅಧಿಕಾರ ಹಸ್ತಾಂತರಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್ ಎಸ್.ಎನ್., ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net