ಎಸ್ಕಲೇಟರ್ ಕಾಮಗಾರಿ ಬೇಗ ಮುಗಿಸಿ

Ballari MaheshwarSwamy
Published on

ಬಳ್ಳಾರಿ: ಬಳ್ಳಾರಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ರೈಲ್ವೆ ಕ್ರಿಯಾ ಸಮಿತಿ ಮಂಗಳವಾರ ರೈಲ್ವೆ ಸ್ಟೇಷನ್ ಮ್ಯಾನೇಜರ್ ನಾಗೇಶ್ ಬಾಬು ಶರ್ಮ ಹಾಗೂ ಸೆಕ್ಷನ್ ಇಂಜಿನಿಯರ್ ರಾಜನಾಯಕ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಮಾತನಾಡಿ, ಪ್ರತಿನಿತ್ಯ 80 ರೈಲುಗಳು ಸಂಚರಿಸುವ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಸ್ವಯಂ ಚಾಲಿತ ವಿದ್ಯುತ್ ಮೆಟ್ಟಲುಗಳಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಯಾಣಿಕರ ಸೇವೆಗೆ ಒಂದು ತಿಂಗಳೊಳಗೆ ಒದಗಿಸುವಂತೆ ಮನವಿ ಮಾಡಿದರು.

ಸಮಿತಿಯ ಪದಾಧಿಕಾರಿಗಳಾದ ಜಿ.ರಾಮಚಂದ್ರಯ್ಯ, ಕೋಳೂರು ಚಂದ್ರಶೇಖರಗೌಡ, ಎಚ್.ಕೆ.ಗೌರಿಶಂಕರ, ಬಿ.ಎಂ. ಎರ‌್ರಿಸ್ವಾಮಿ, ಶ್ರೀನಿವಾಸ್ ಪಾಟೀಲ್ ಹಾಗೂ ವಿಶ್ರಾಂತ ಸ್ಟೇಷನ್ ಮ್ಯಾನೇಜರ್ ಎ.ಆರ್.ಜಿ. ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net