ರೆಡ್ಡಿಗೆ ಸುಳ್ಳಿನ ಕೋಟೆ ಕಟ್ಟುವ ಗುಣ

Published on

ಬಳ್ಳಾರಿ : ಮೊದಲಿನಿಂದಲೂ ಸುಳ್ಳಿನ ಮೇಲೆ ಕೋಟೆ ಕಟ್ಟುವ ಗುಣ ಶಾಸಕ ಜಿ.ಜನಾರ್ದನರೆಡ್ಡಿ ಸ್ವರೂಪವಾಗಿದೆ ಎಂದು‌ ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.

ನಗರದಲ್ಲಿ ಸ್ವಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸತೀಶ್ ಜಾರಕಿಹೊಳಿ ಮಣಿಸಲು ರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಡಿಸಿಎಂ ಡಿ.ಕೆ.ಶಿವಕುಮಾರ ಹೂಡಿದ ತಂತ್ರ ಎಂಬುದಾಗಿ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಜಾರಕಿಹೊಳಿ ಮಣಿಸುವುದಕ್ಕೆ ನಾನು ಯಾರು ? ಈ ಊರಿನ ರಾಜ ಮತ್ತೊಂದು ಊರಿನಲ್ಲಿ ಗುಲಾಮ. ಅದರಂತೆ ಬಿಜೆಪಿಯಲ್ಲಿ ನಾನು ಪ್ರಭಾವಿ ಹಾಗೂ ಸಮುದಾಯ ನಾಯಕನೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಹೇಳಿದರು. ಕಾಂಗ್ರೆಸ್ ನಲ್ಲಿ 137 ಶಾಸಕರಿದ್ದಾರೆ. ಅವರು ಏಕೆ ನನ್ನ‌ ಕರೆದುಕೊಳ್ಳುತ್ತಾರೆ. ನಾನು ಹೋಗ್ತಿನಿ ಅಂದರೆ ಯಾರು ಬೇಡ ಎನ್ನುತ್ತಾರೆ. ಶಾಸಕರಾದ ರಮೇಶ ಜಾರಕಿಹೊಳಿ, ಬಸವನಗೌಡ ‌ಪಾಟೀಲ್ ಯತ್ನಾಳ್ ಇಬ್ಬರು ಒಳ್ಳೆಯ ಸ್ನೇಹಿತರೆ. ಆದರೆ, ಅವರ ಒಂದು ಸಭೆಗಳಿಗೂ ಹಾಜರಾಗಿಲ್ಲ ಎಂದರು.

ನಾಲ್ಕು ವರ್ಷ ಜೈಲಿನಲ್ಲಿದ್ದ ವೇಳೆ ಅವರಿವರ ಕೈಕಾಲು ಹಿಡಿದು ಹೊರಗಡೆ ತಂದಿರುವೆ ಬಗ್ಗೆ ರೆಡ್ಡಿ ತಿಳಿದಿದೆ. ರೆಡ್ಡಿ ಇಲ್ಲದ ವೇಳೆಯೂ ಕೂಡ ಬಿಜೆಪಿಯನ್ನು ಕಟ್ಟಿರುವೆ. ಯಾರ ಕೃಪಾ ಕಟಾಕ್ಷದಿಂದ ಬೆಳೆದಿಲ್ಲ ಎಂದು ತಿರುಗೇಟು‌ ನೀಡಿದರು. ಮೊಳಕಾಲ್ಮೂರುನಿಂದ ಸ್ಫರ್ಧಿಸಿದ ವೇಳೆ ಮ್ಯಾಜಿಕ್ ಮಾಡಿ ಗೆಲ್ಲಿಸಿರುವೆ ಎಂಬುದಾಗಿ ಹೇಳುತ್ತಿದ್ದಾರೆ. ಎರಡು ಕಡೆ ನಿಂತು ಸ್ಪರ್ಧೆ ಮಾಡುವುದು ಅಷ್ಟು ಸುಲಭವಲ್ಲ. ಈತ ಬಂದು ಮ್ಯಾಜಿಕ್ ಮಾಡಿ ಗೆಲ್ಲಿಸಿಲ್ಲ ಪಕ್ಷ ನನ್ನ ಸಾರ್ಮಥ್ಯ ತಿಳಿದು ಎರಡು ಕಡೆ‌ ಟಿಕೆಟ್ ನೀಡಿತ್ತು. ಬಾದಾಮಿಯಲ್ಲಿ ನಮ್ಮ‌ ಸಮುದಾಯವರೇ ಇರಲಿಲ್ಲ, ಆದರೂ ಪಕ್ಷದ ನಿರ್ಣಯದಂತೆ ಸ್ಪರ್ಧಿಸಿ‌ ಸೋತಿರುವೆ. ಅವನು, ಅವನು ಅನ್ನುವ ಸಂಪ್ರದಾಯ ನನ್ನದಲ್ಲ ಅವನು ಅಂದಹಾಗೇ‌ ಹೇಳುವದಕ್ಕೆ ಆಗಲ್ಲ. ನನ್ನನ್ನು ಕ್ರಿಮಿನಲ್ ಯಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ರಾಜಕೀಯ ಇರಲಿ ಬಿಡಲಿ ಸದಾ ಬಡವರ ಪರ ಕಾಳಜಿ ಹೊಂದಿರುವೆ. ಯಾರು ಯಾರನ್ನು ಬೆಳೆಸಲು ಆಗಲ್ಲ ಅವರ ಹಣೆಬರಹ ಚೆನ್ನಾಗಿರಬೇಕು. ರೆಡ್ಡಿ ನಿಮ್ಮ ಎಲ್ಲ ಕ್ರಿಮಿನಲ್ ಕತೆಗಳ ಬಗ್ಗೆ‌ ತಿಳಿದಿದೆ ಸಮಯ ಬಂದ ವೇಳೆ ದಾಖಲೆಗಳನ್ನು ಬಹಿರಂಗಪಡಿಸುವೆ. ಮೊದಲ ಬಾರಿಗೆ ಜೈಲಿನಿಂದ ಹೊರಗಡೆ ಬಂದಾಗ ಜಿಲ್ಲೆಗೆ ಭವ್ಯ ಸ್ವಾಗತದ‌ ಮೂಲಕ‌ ರೆಡ್ಡಿಯನ್ನು ಸ್ವಾಗತಿಸಿದೆ. ಇತ್ತೀಚೆಗೆ ಭೇಟಿ‌‌ ನೀಡಿದಾಗ ನಾನು ಹೋಗಲಿಲ್ಲ. ಆದರೆ, ಅವರೇ ಮಾಧ್ಯಮವರ ಮುಂದೆ‌ ರಾಮುಲುಗೆ ಆರೋಗ್ಯ ಸರಿಯಲ್ಲ ಎಂಬುದಾಗಿ ಸುಳ್ಳು ಹೇಳಿದರು. ಅಲ್ಲಿಂದಲೇ ಇಬ್ಬರಲ್ಲಿ ಭಿನ್ನಭಿಪ್ರಾಯ ಮೂಡಿತು. ಎಲ್ಲರನ್ನೂ ಮುಗಿಸಬೇಕಾದ ಎನ್ನುವುದೇ ರೆಡ್ಡಿ ಕಾಯಿಲೆ. ಎಲ್ಲವನ್ನೂ ನಾನೇ ಮಾಡಿರುವೆ ಎಂದು ಹೇಳಿ ಜನರನ್ನು ತಮ್ಮ‌ಕಡೆ ವಾಲಿಸಿಕೊಂಡಿದ್ದಾರೆ. ಬಂಗಾರು ಹನುಮಂತು ಬಹಳ ಸ್ಫಿಡ್ ಇದ್ದಾನೆ, ಸ್ಪೀಡ್ ಯಾಗಿ ಹೋದರೆ ಆಕ್ಸಿಡೆಂಟ್ ‌ಆಗುತ್ತದೆ. ಅವನ ಜತೆಗೆ ರೆಡ್ಡಿ ಸೇರಿಕೊಂಡು ‌ಈಗ ಆಗಿದಾನೆ ಎಂದು ಕಿಡಿಕಾರಿದರು. ಸಂಡೂರಿನ ‌ಚುನಾವಣೆಯ‌ ಸೋಲಿನ ಬಗ್ಗೆ‌ ಮಾಜಿ ಸಿಎಂ‌ ಸದಾನಂದಗೌಡ ಅವರು ವರದಿ ಕೊಡುವ ಮುನ್ನವೇ ಶ್ರೀರಾಮುಲು ತಪ್ಪಿಸ್ಥರು ಎಂಬುದಾಗಿ ಯಾರು ಹೇಳಿದರು ?. ರೆಡ್ಡಿ ನನ್ನ ವಿರುದ್ಧ ತಪ್ಪು ಆರೋಪ ಮಾಡಿದ್ದಾರೆ. ಮಾಧ್ಯಮದ ಮುಂದೆ ಕೋರ ಕಮಿಟಿ ಬಗ್ಗೆ ಪ್ರಸ್ತಾಪಿಸುವೆ ವೇಳೆ‌ ಪಕ್ಷದ ‌ಪ್ರಮುಖರು ತಡೆದರು. ರಾಜ್ಯಮಟ್ಟದ ‌ಕೋರ್ ಕಮಿಟಿ‌ ಸಭೆಯಲ್ಲಿ ನನ್ನ ಮೇಲೆ ವರಿಷ್ಠರು ಮಾಡಿರುವ ಆರೋಪಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿರುವೆ. ಉತ್ತರ ‌ನೀಡದಿದ್ದರೆ ನಾನು ತಪ್ಪು ‌ಮಾಡಿದವನು ಆಗುತ್ತಿದ್ದೆ. ನನ್ನ ಮೇಲಿನ ಆರೋಪಿಸಿದ ವೇಳೆ ರಾಜ್ಯಾಧ್ಯಕ್ಷರು ನೆರವಿಗೆ ಬರಲಿಲ್ಲ. ಸುಳ್ಳು ಬಲಾಢ್ಯರ ಕೈ ಯಲ್ಲಿ ಇದ್ದಾರೆ ಸತ್ಯವಾಗುತ್ತದೆ. ಆದ್ದರಿಂದ ಈ ಎಲ್ಲ ವಿಷಯಗಳನ್ನು ಕೇಂದ್ರದ ರಾಜನಾಥಸಿಂಗ್ , ಅಮಿತಾ ಷಾ ಹಾಗೂ ಸಂಘದ ಪ್ರಮುಖರಿಗೆ ತಿಳಿಸಲು ಸಮಯ ಕೇಳಿರುವೆ. ನನಗೆ‌ ಚುತ್ಯ ಬರುವುದಾದರೆ ರೆಬಲ್ ಆಗಿ ಹೊರ ಹೊಮ್ಮುವೆ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net