ಪರಿಸರ ರಕ್ಷಣೆ-ಸಮಾಜ ಸೇವೆ ಮಾಡಿ

Ballari Redcross
ಬಳ್ಳಾರಿಯ ರೆಡ್‌ಕ್ರಾಸ್ ಸಂಸ್ಥೆ ಆವರಣದಲ್ಲಿ ಸಸಿ ನೆಡುವ ಹಾಗೂ ಉದ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್‌ರೆಡ್ಡಿ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಪೇರಂ ವೀರೇಶ್, ಡಾ..ಎಸ್.ಜೆ.ವಿ.ಮಹಿಪಾಲ್, ಪೋಲಾ ರಾಧಾಕೃಷ್ಣ, ಇರ್ಫಾನ್ ಇತರರಿದ್ದರು.
Published on

ಬಳ್ಳಾರಿ: ಜೀವನದಲ್ಲಿ ಎಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ರೆಡ್‌ಕ್ರಾಸ್ ಸಂಸ್ಥೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಉದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಸಂಸ್ಥೆಗೆ ಅಗತ್ಯ ಸಹಕಾರ, ಸಹಾಯ ಇರಲಿದೆ ಎಂದ ಅವರು, ಸಮಾಜ ಸೇವೆ ಮತ್ತು ಪರಿಸರ ಕುರಿತು ಪ್ರತಿಯೊಬ್ಬರೂ ಕಾಳಜಿವಹಿಸಬೇಕು ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಪೇರಂ ವೀರೇಶ್ ಮಾತನಾಡಿ, ಬಳ್ಳಾರಿ ಜಿಲ್ಲೆ ಬಿಸಿಲುನಾಡು ಎಂದೇ ಖ್ಯಾತಿಯಾಗಿದೆ. ಪರಿಸರದಲ್ಲಿ ಬದಲಾವಣೆ ತಂದಾಗ ಮಾತ್ರ ಬಿಸಿಲಿನ ತಾಪಮಾನ ಕಡಿಮೆ ಆಗಲಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡಬೇಕಿದೆ ಎಂದರು.

ಡಾ.ಎಸ್.ಜೆ.ವಿ.ಮಹಿಪಾಲ್, ಪೋಲಾ ರಾಧಾಕೃಷ್ಣ, ಇರ್ಫಾನ್, ಎಂ.ಎ.ಷಕೀಬ್, ಕಪ್ಪಗಲ್ಲು ವೀರೇಶ್, ಬಿ.ದೇವಣ್ಣ, ಸಾಧನಾ ಹಿರೇಮಠ, ಶಿವ ಸಾಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net