ಬಳ್ಳಾರಿ : ಸಿರಿಧಾನ್ಯಗಳಿಂದ ತಯಾರಿ ಸೇವಿಸಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ಇಲ್ಲಿನ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ಸಿರಿಧಾನ್ಯ ಮತ್ತು ಸಾವಯುವ ಅಂತರಾಷ್ಟ್ರೀಯ ವಾಣಿಜ್ಯ ಮೇಳ 2025 ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಜ್ಜೆ, ಜೋಳ, ರಾಗಿ, ಮತ್ತು ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸಬೇಕು. ವಿದೇಶಿ ಆಹಾರ ಪದಾರ್ಥಗಳಾದ ಪಿಜ್ಜಾ, ಬರ್ಗರ್ ಮತ್ತು ಡೊಮಿನೋಸ್ ಮತ್ತು ಎಣ್ಣೆ ಪದಾರ್ಥ ಸೇವಿಸುವುದು ಆರೋಗ್ಯ ಪೂರಕವಲ್ಲ. ಪಾಕ ಸ್ಪರ್ಧೆಗೆ ಮಾತ್ರ ಸಿರಿಧಾನ್ಯ ಪದಾರ್ಥಗಳು ಸೀಮಿತವಾಗಬಾರದು. ನಿಮ್ಮ ಮನೆಗಳಲ್ಲಿ ಸಹ ಪ್ರತಿದಿನ ಸಿರಿಧಾನ್ಯಗಳಿಂದ ವಿವಿಧ ಬಗೆಯ ಪದಾರ್ಥಗಳು ತಯಾರಿಸಿ, ನಿಮ್ಮ ಮಕ್ಕಳಿಗೆ ನೀಡಬೇಕು ಎಂದು ಸಲಹೆ ನೀಡಿದರು.