

ಹುಬ್ಬಳ್ಳಿ: ಆರಂಭಿಕ ಸಾಯಿರಾಜ್ ಸಾಳುಂಕೆ ಭರ್ಜರಿ ಅರ್ಧ ಶತಕ (52ರನ್, 29ಎಸೆತ, 10ಬೌಂ., 1ಸಿ.)ದ ನೆರವಿನಿಂದ ಬೆಳಗಾವಿಯ ಯೂನಿಯನ್ ಜಿಮ್ಾನಾ, ಶ್ರೀದುರ್ಗಾ ಕಪ್-16 ವಯೋಮಿತಿಯ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಸೋಮವಾರ ದುರ್ಗಾ ವುಮೆನ್ಸ್ ಕಂಬೈನ್ಡ್ ಇಲೆವನ್ ವಿರುದ್ಧ 10 ವಿಕೆಟ್ಗಳಿಂದ ಸುಲಭ ಗೆಲುವು ಸಾಧಿಸಿತು.
ದೇಶಪಾಂಡೆನಗರದ ಕೆಜಿಎ ಮೈದಾನದಲ್ಲಿ ಈ ಪಂದ್ಯವು ಬಾಲಕರ ವಿರುದ್ದ ಬಾಲಕಿಯರ ಸೆಣಸಾಟವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದುರ್ಗಾ ವುಮೆನ್ಸ್ ಕಂಬೈನ್ಡ್ 25 ಓವರ್ಗಳಲ್ಲಿ 8 ವಿಕೆಟ್ಗೆ 87ರನ್ ಗಳಿಸಿತ್ತು. ಲಕ್ಷ್ಮೀ ಬಾಗೇವಾಡಿ 27 ರನ್ ಬಾರಿಸಿದರು. ಯೂನಿಯನ್ ಜಿಮ್ಾನಾ 7.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 88 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆನಂದ ಕ್ರಿಕೆಟ್ ಅಕಾಡೆಮಿಗೆ ಜಯ
ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ನ ವಿರುದ್ಧ ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡಮಿ 3 ವಿಕೆಟ್ಗಳಿಂದ ಜಯ ದಾಖಲಿಸಿತು.
ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ 83 ರನ್ಗೆ ಆಲೌಟ್ ಆಯಿತು. ಮನೀಷ್ ನಸನೂರ 31 ರನ್ ಬಾರಿಸಿದರು. ಆನಂದ ಕ್ರಿಕೆಟ್ ಅಕಾಡಮಿ ಪರ ಸುಮಿತ ಕೆ. 3, ಲಾಭ ವೆರ್ಣೆಕರ್ ಹಾಗೂ ಸ್ವರಾಜ್ ತಲಾ 2 ವಿಕೆಟ್ಗಳನ್ನು ಪಡೆದರು. ಓಂ ಜಕಾತಿ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 40 ರನ್ ಬಾರಿಸಿ ಆನಂದ ಕ್ರಿಕೆಟ್ ಅಕಾಡೆಮಿಗೆ ಗೆಲುವು ತಂದಿತ್ತರು. ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಹರ್ಷಿತ ಶಿವಪುರ ಹಾಗೂ ಸುಹಾಸ ಮಮದಾಪೂರ ತಲಾ 3ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಅ. 17ರಂದು ಬೆಳಗ್ಗೆ 8.30ಕ್ಕೆ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ-ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಧ್ಯಾಹ್ನ 1ಗಂಟೆಗೆ ದುರ್ಗಾ ವುಮೆನ್ಸ್ ಕಂಬೈನ್ಡ್- ಲಕ್ಷ ಕ್ರಿಕೆಟ್ ಅಕಾಡೆಮಿ ಚಿಕ್ಕೋಡಿ ಸೆಣಸಲಿವೆ.