

ಬೆಳಗಾವಿ : ರಾಜ್ಯದಲ್ಲಿಯೇ ಅತಿ ವಿಜೃಂಭಣೆಯಿಂದ ನಡೆಯುವ ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆಗೆ ನಗರ ಪೊಲೀಸ್ ಆಯುಕ್ತಾಲಯದ ಖಾಕಿ ಪಡೆ ಬಂದೋಬಸ್ತ್ ಜತೆಗೆ ಸಿಸಿ ಕ್ಯಾಮೆರಾ ಮತ್ತು ಡ್ರೋಣ್ ಕಣ್ಗಾವಲು ಇರಿಸಿದೆ.
ಶಿವಾಜಿ ಜಯಂತಿ ಅಂಗವಾಗಿ ಮೇ.27ರಂದು ಬೆಳಗಾವಿ ನಗರದಲ್ಲಿ ನಡೆಯಲಿದ್ದು, ಮೆರವಣಿಗೆ ಮಾರ್ಗದುದ್ದಕ್ಕೂ ಅಹಿತಕರ ಘಟನೆ ನಡೆಯಂತೆ ನಿಗಾವಹಿಸಲು ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವಹಿಸಿದೆ.
ನಗರ ಪೋಲಿಸ್ ಆಯುಕ್ತ ಡಾ.ಎಂ.ಬಿ.ಬೋಲಿಂಗಯ್ಯ ನೇತೃತ್ವದಲ್ಲಿ ಓರ್ವ ಎಸ್ಪಿ, ಇಬ್ಬರು ಡಿಸಿಪಿ, ಡಿವೈಎಸ್‌ಪಿ ಹಾಗೂ ಎಸಿಪಿ-15, ಸಿಪಿಐ 42, ಪಿಎಸ್‌ಐ-80, ಎಎಸ್‌ಐ-136, 1500 ಪೇದೆಗಳು, 400 ಗೃಹ ರಕ್ಷಕರು, 8 ಸಿಎಆರ್ ತುಕಡಿ, ಎಎಸ್‌ಸಿ-2 ಹಾಗೂ 14 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 2500 ಕ್ಕೂ ಅಧಿಕ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಈಗಷ್ಟೇ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು ನೂತನ ಜನಪ್ರತಿನಿಧಿಗಳ ಆಯ್ಕೆಯಿಂದಾಗಿ ಅನ್ಯಕೋಮುಗಳ ನಡುವೆ ಸಾಮಾರಸ್ಯ ಕಾಪಾಡಿಕೊಂಡು ಯಶಸ್ವಿಯಾಗಿ ಜಯಂತಿ ನಡೆಸುವುದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ, ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಉತ್ಸವದ ಮಹಾಮಂಡಳ ಪದಾಧಿಕಾರಿಗಳು, ವಿವಿಧ ಹಿಂದು ಪರ ಹಾಗೂ ಮುಸ್ಲಿಂ ಸಂಘಟನೆ ಮತ್ತು ವ್ಯಾಪಾರಸ್ಥರೊಂದಿಗೆ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹಾಗೂ ಡಿಸಿಪಿಗಳು ಸಭೆ ನಡೆಸಿ, ಶಾಂತಿ ಸುವೈವಸ್ಥೆಗೆ ಧಕ್ಕೆ ತರದಂತೆ ಶಾಂತಿಯುತವಾಗಿ ಶಿವಾಜಿ ಜಯಂತಿ ಆಚರಿಸಬೇಕು ಎಂದು ಸೂಚಿದ್ದಾರೆ.
ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಶುಕ್ರವಾರ ಮಾರ್ಚ್ ಫಾಸ್ಟ್ ನಡೆಸಲಾಯಿತು. ಅಲ್ಲದೇ, ಮಾರ್ಗದುದ್ದಕ್ಕೂ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಕ್ಯಾಮೆರಾಗಳ ಜತೆಗೆ ಡ್ರೋಣ್ ಕಣ್ಗಾವಲು ಇಡಲಾಗುತ್ತಿದೆ. ಸಾರ್ವಜನಿಕರು ಶಾಂತಿಯುತವಾಗಿ ಆಚರಿಸಿ ಸಹಕರಿಸಬೇಕು. ಶಾಂತಿ ಕದಡುವ ಪ್ರಯತ್ನ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಡಾ.ಎಂ.ಬಿ.ಬೋಲಿಂಗಯ್ಯ, ನಗರ ಪೊಲೀಸ್ ಆಯುಕ್ತ.
ಡಾ.ಎಂ.ಬಿ.ಬೋಲಿಂಗಯ್ಯ, ನಗರ ಪೊಲೀಸ್ ಆಯುಕ್ತ.