ಬೆಳಗಾವಿಯಲ್ಲಿ ಕುತೂಹಲ ಹೆಚ್ಚಿಸಿದ ರೋಬಾಟಿಕ್ಸ್ ಕಾರ್ಯಾಗಾರ

Screenshot_2023_0901_114820.png
Published on

ಬೆಳಗಾವಿ: ಇಲ್ಲಿನ ಇಂಡಸ್‌ ಆಲ್ಟಮ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಹಾಗೂ ಸಿನರ್ಜಿ (SYNERGY) ಸಹಯೋಗ ದಲ್ಲಿ ಈಚೆಗೆ, ಶಾಲೆಯ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ‘ರೋಬಾಟಿಕ್ಸ್‌ ಕಾರ್ಯಾಗಾರ’ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ರೋಬಾಟಿಕ್ಸ್‌ ತಂತ್ರಜ್ಞಾನ, ಎಲೆಕ್ಟ್ರಿಕಲ್‌ ಹಾಗೂ ಎಲೆಕ್ಟ್ರಾನಿಕ್ಸ್ ಭಾಗಗಳ ಕಾರ್ಯನಿರ್ವಹಣೆಯ ರೀತಿ, ವಿಜ್ಞಾನಿ ಓಹಮ್ಸ್‌ ಅವರ ಸಿದ್ಧಾಂತಗಳ ಕುರಿತು ಮಾಹಿತಿ ನೀಡಲಾಯಿತು.

ರೋಬಾಟ್‌ ತಂತ್ರಜ್ಞಾನದಲ್ಲಿ ಭೌತಿಕ ಕ್ರಿಯೆಗಳು, ಮ್ಯಾನ್ಯುವಲ್‌ ಬೋಟ್‌ ನಿರ್ಮಾಣ, ಡಬಲ್‌ ಪೋಲ್‌– ಡಬಲ್‌ ಥ್ರೋ (ಡಿಪಿಡಿಟಿ) ಸ್ವಿಚ್‌, ಎಲೆಕ್ಟ್ರಿಕಲ್‌ ಕಂಟ್ರೋಲ್ಸ್‌... ಹೀಗೆ ವಿವಿಧ ತಾಂತ್ರಿಕ ಗುಣಗಳನ್ನು ಮಕ್ಕಳು ಪರಿಚಯ ಮಾಡಿಕೊಂಡರು.

ಸಿನರ್ಜಿಯ ಮಾರ್ಗದರ್ಶಕರು ಈ ಕಾರ್ಯಾಗಾರ ನೆರವೀರಿಸಿಕೊಟ್ಟರು. ರೋಬಾಟ್‌ಗಳ ನಿರ್ಮಾಣ ಕುರಿತು ಮಕ್ಕಳಲ್ಲಿನ ಹಲವು ಕುತೂಹಲಗಳಿಗೆ ಅವರು ಉತ್ತರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net