ಚಂದ್ರಯಾನ ಯಶಸ್ಸಿಗೆ ಪ್ರಾರ್ಥಿಸಿದ ಬೆಳಗಾವಿ

IMG-20230823-WA0072.jpg
Published on

ಬೆಳಗಾವಿ : ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ‘ಚಂದ್ರಯಾನ-3’ ಯಶಸ್ವಿಗಾಗಿ ಬೆಳಗಾವಿ ನಗರ ಸೇರಿದಂತೆ ಇಡೀ ಜಿಲ್ಲಾದ್ಯಂತ ಕನ್ನಡಪರ ಸಂಘಟನೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೇವಸ್ಥಾನಗಳಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿನ ಗಣಪತಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ವಿಶೇಷ ಪೂಜೆ ಸಲ್ಲಿಸಿ, ಚಂದ್ರಯಾನ-3 ಚಂದ್ರನ ಅಂಗಳವನ್ನು ನಿರ್ವಿಘ್ನವಾಗಿ ಪ್ರವೇಶಿಸಲಿ ಎಂದು ಪ್ರಾರ್ಥಿಸಿದರು. ಅದರಂತೆ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ನೆರವೇರಿಸಲಾಯಿತು.

ಬುಧವಾರ ಚಂದ್ರಯಾನ-3 ವಿಕ್ರಮ ಲ್ಯಾಂಡ್ ಚಂದ್ರನ ಕಕ್ಷೆಗೆ ಇಳಿಯಲು ಕ್ಷಣಗಣನೆ ಆರಭವಾಗುತ್ತಿದ್ದಂತೆಯೇ ಕಪಿಲೇಶ್ವರ ದೇವಸ್ಥಾನದಲ್ಲಿ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಹಾರುದ್ರಾಭಿಷೇಕದ ಜತೆಗೆ ವಿಶೇಷ ಪೂಜೆ ಸಲ್ಲಿಸಿದ ನೂರಾರು ಭಕ್ತರು, ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಿದರು.
 

140 ಕೋಟಿ ಭಾರತೀಯರ ಬಯಕೆ ಈಡೇರಲೇಂದು ಕಪಿಲೇಶ್ವರ ದೇವರಿಗೆ ವಿಶೇಷವಾಗಿ ರುದ್ರಾಭಿಷೇಕ, ಶತರುದ್ರಾಭಿಷೇಕ, ಲಘುರುದ್ರಾಭಿಷೇಕ, ರುದ್ರಾಕ್ಷಿಭಿಷೇಕ, ಏಕಾದಶಿ ಪೂಜೆಗಳನ್ನು ಮಾಡಿದ್ದೇವೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಸ್ಪರ್ಶ ಮಾಡಲಿ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಲಿ. ಇದರಲ್ಲಿ ನಮ್ಮ ಬೆಳಗಾವಿಯ ಇಬ್ಬರು ವಿಜ್ಞಾನಿಗಳು ಕೈ ಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದು ದೇವಸ್ಥಾನದ ಅರ್ಚಕ ನಾಗರಾಜ ಕಟ್ಟಿ ಅಭಿಮಾನ ವ್ಯಕ್ತಪಡಿಸಿದರು.
ಇನ್ನು ನಗರ ಸೇರಿದಂತೆ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ವಿವಿಧ ಖಾಸಗಿ ಶಾಲಾ-ಕಾಲೇಜುಗಳಲ್ಲಿಯೂ ಚಂದ್ರಯಾನದ ಯಶಸ್ವಿಯಾಗಿ ನೆರವೇರಲಿ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net