ಪತ್ನಿ ಕೊಲೆಗೈದು ಪೊಲೀಸ್ ಠಾಣೆಗೆ ಶರಣಾದ ಪತಿ

IMG-20230603-WA0023.webp
Published on

ಬೆಳಗಾವಿ : ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬಸವ್ವ ಹಣಮಂತ ಹಿಡಕಲ (30) ಕೊಲೆಯಾದ ದುರ್ದೈವಿ. ಹಣಮಂತ ಸಿದ್ದಪ್ಪ ಹಿಡಕಲ ( 35) ಆರೋಪಿ.

ಪತಿ ಹಣಮಂತ ಯಾವುದೇ ಕೆಲಸ ಮಾಡದೇ ಓಡಾಡಿಕೊಂಡಿದ್ದು, ಬಸವ್ವ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು. ಪತಿ ಹಣಮಂತನಿಗೆ " ನೀನು ಕೆಲಸ ಮಾಡುತ್ತಿಲ್ಲ " ಎಂದು ಬಸವ್ವ ಆಕ್ಷೇಪ ಮಾಡುತ್ತಿದ್ದ ಕಾರಣ ದಂಪತಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ಜಗಳ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಅಂತ್ಯಗೊಂಡಿದೆ. ದಂಪತಿಗೆ 10 ವರ್ಷದ ಓರ್ವ ಮಗನಿದ್ದಾನೆ. ತಾಯಿ ಮೃತಪಟ್ಟು ತಂದೆಯೂ ಜೈಲು ಸೇರಿದ ಕಾರಣ 10 ವರ್ಷದ ಬಾಲಕ ಅನಾಥನಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net