ಶ್ರೀ ನುಲಿ ಚಂದಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ

IMG-20230831-WA0068.jpg
Published on

ಬೆಳಗಾವಿ : ಶ್ರೀನುಲಿ ಚಂದಯ್ಯನವರ ಜಯಂತಿ ನಿಮಿತ್ತ  ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿಯಾದ ವಿಜಯಕುಮಾರ ಹೊನಕೇರಿ  ಅವರು ಕಿಲ್ಲಾ ಕೋಟೆ, ಅಶೋಕ ವೃತ್ತದಲ್ಲಿ ಚಾಲನೆ ನೀಡಿದರು.

ಜಿಲ್ಲಾಡಳತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಿಲ್ಲಾ ಕೋಟೆಯ ಅಶೋಕ ವೃತ್ತದಿಂದ ಆರಂಭವಾದ ಶ್ರೀ ನುಲಿ ಚಂದಯ್ಯನವರ ಭಾವ ಚಿತ್ರದ ಭವ್ಯ ಮೆರವಣಿಗೆ  ಆರ್.ಟಿ.ಓ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ  ಕಲಾ ಮಂದಿರವನ್ನು ತಲುಪಿತು.

ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಬೆಂಗಳೂರಿನ ಮತ್ತೇಶ್ವರ ಸ್ವಾಮಿಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬೆಳಗಾವಿ ಕೊರುವ ಸಮಾಜದ ಜಿಲ್ಲಾ ಅಧ್ಯಕ್ಷರಾದ ರಾಮಜಿ  ಭಜಂತ್ರಿ, ಹಾಗೂ ಸಮುದಾಯ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net