ಪ್ರತಿ ವರ್ಷವೂ ಮನೆಗೆ ನುಗ್ಗುವ  ಮಳೆ ನೀರು; ಪರಿಹಾರ ಮರಿಚಿಕೆ

IMG-20230724-WA0085.jpg
Published on

ಬೆಳಗಾವಿ : ತಾಲೂಕಿನಲ್ಲಿ ಸೋಮವಾರವೂ ಸುರಿದ ಧಾರಾಕಾರ ಮಳೆಗೆ ವಡಗಾಂವಿಯಲ್ಲಿನ ಅನೇಕ ಮನೆಗಳಲ್ಲಿ ನೀರು ನುಗ್ಗಿ ಹಾನಿ ಸಂಭವಿಸಿದೆ. ಇಲ್ಲಿನ ನಿವಾಸಿಗಳ ಗೋಳು ಇದೇ ಆದರೂ, ಹಾನಿಗೊಳಗಾದ ಮಳೆಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಮಾತ್ರ ಕೈಗೆಟುಕುತ್ತಿಲ್ಲ.

ನಿರತರಾದ ಮಳೆ ಸುರಿಯುತ್ತಿದ್ದರಿಂಂದ ದಿನವೀಡಿ ಮಳೆ ನೀರು ಹೊರಹಾಕುವಲ್ಲಿ ಕುಟುಂಬದ ಸದಸ್ಯರು ಪರದಾಡಿದರು. ಪ್ರತಿ ವರ್ಷವೂ ಮಳೆಯಿಂದಾಗಿ ಹಾನಿ ಅನುಭವಿಸುತ್ತಿದ್ದರೂ, ಸರ್ಕಾರ ಶಾಶ್ವತ ಪರಿಹಾರ ಒದಗಿಸುತ್ತಿಲ್ಲ, ಅಲ್ಲದೇ,ಸೂಕ್ತ ಪರಿಹಾತವನ್ನೂ ಸಕಾಲಕ್ಕೆ ವಿತರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮನೆಗೆ ನುಗ್ಗಿದ ನೀರಿನ ನಡುವೆ ಅಡುಗೆ
ಮನೆಗೆ ನುಗ್ಗಿದ ನೀರಿನ ನಡುವೆ ಅಡುಗೆ

ಸರ್ಕಾರದ ಪರಿಹಾರ ಕೈಗೊಟುಕದ ಬಗ್ಗೆ ಮಾತನಾಡಿದ ಫಕಿರಾಬಾಯಿ ಜಾದವ್ ಅವರು, 'ಪ್ರತಿವರ್ಷ ಮಳೆಯಾದಗಲೂ ಮನೆ ಸೋರುತ್ತದೆ. ರಸ್ತೆಯಲ್ಲಿನ ಮಳೆ ನೀರು ಮನೆ ನುಗ್ಗುತ್ತದೆ. 2019ರಲ್ಲಿಯೇ ಮನೆ ಭಾಗಶಃ ಹಾನಿಗೊಳಗಾಗಿದ್ದರಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದೇವು. ಆದರೆ,  ಪ್ರತಿ ಬಾರಿ ಅರ್ಜಿ ಸಲ್ಲಿದಾಗಲೂ, ಪರಿಹಾರಕ್ಕಾಗಿ ಫಲನುಭವಿಯಾಗಿ ಆಯಗಕರಯಾಗಿದ್ದೀರಿ. ಶೀಘ್ರವೇ ಅಧಿಕಾರಿಗಳು ಜಿಪಿಎಸ್ ಮಾಡುತ್ತಾರೆ' ಎಂದು ಶಾಸಕರ ಸಮಾಧಾನದ ಪತ್ರಬರುತ್ತದೆಯೇ ಹೊರತು; ಯಾವೊಬ್ಬ  ಅಧಿಕಾರಿಯೂ ಬಂದಿಲ್ಲ. ಇನ್ನು ಪರಿಹಾರ ದೂರದ ಮಾತು' ಎಂದು ಅಳಲುತೋಡಿಕೊಂಡರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net