

ಬೆಳಗಾವಿ : ಶಿಕ್ಷಕರ ದಿನಾಚರಣೆ ನಿಮಿತ್ತ ಜೇಯಂಟ್ಸ್ ಗ್ರೂಪ್ ಆಫ್ ಬೆಲಗಾಂ (ಮೇನ್) ವತಿಯಿಂದ 2023 ಸಾಲಿನ ವಾರ್ಷಿಕ ಆದರ್ಶ ಶಿಕ್ಷಕ ಪುರಸ್ಕಾರವನ್ನು ಪ್ರೊ.ಜೆ.ಮಂಜಣ್ಣ, ಪ್ರೊ.ಅಶೋಕ ಡಿಸೋಜಾ, ನಿಂಗಪ್ಪಾ ಬಾಳೆಕುಂದ್ರಿ, ಕುಶಕುಮಾರ ದೇಸಾಯಿ ಮತ್ತು ಮಹೇಶ ಸಡೇಕರ ಅವರಿಗೆ ನೀಡಲಾಗಿದೆ.
ಮಂಗಳವಾರ ನಗರದ ಕಪಿಲೇಶ್ವರ ಮಂದಿರದ ಸಮೀಪದ ಜೇಯಂಟ್ಸ್ ಭವನದಲ್ಲಿ ಪುರಸ್ಕಾರ ವಿತರಣೆ ನಡೆಯಿತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ್ತದ ಪ್ರಾಧ್ಯಾಪಕ ಪ್ರೊ.ಜೆ.ಮಂಜಣ್ಣ, ಪ್ರಾಧ್ಯಾಪಕ ಪ್ರೊ.ಅಶೋಕ ಡಿಸೋಜಾ, ಖಾನಾಪುರ ತಾಲೂಕಿನ ಕಣಕುಂಬಿ ಹತ್ತಿರದ ಆಮಗಾಂವದಲ್ಲಿ 36 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಿಂಗಪ್ಪ ಬಾಳೇಕುಂದ್ರಿ, ಮಾಸಗೊಂಡಹಟ್ಟಿಯ ಕುಶಕುಮಾರ ದೇಸಾಯಿ, ಜಾಂಬೋಟಿಯ ಪ್ರೌಢಶಾಲೆಯ ಮಹೇಶ ಸಡೇಕರ್ ಅವರ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಆದರ್ಶ ಶಿಕ್ಷಕ ಪುರಸ್ಕಾರ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.