ಶ್ರಾವಣ ಶುಕ್ರವಾರವೇ ತಂದೆ-ಮಗ ದುರಂತ ಸಾವು! ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ

Screenshot_2023_0901_120104.png
Published on

ಬೆಳಗಾವಿ : ಮನೆಯ ಮುಂದಿನ ವಿದ್ಯುತ್ ಕಂಬ ಸ್ಪರ್ಶಿಸಿ ತಂದೆ-ಮಗ  ಸಾವಿಗೀಡಾದ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಪ್ರಭಾಕರ ಹುಂಬಿ (62) ಮೃತ ದುರ್ದೈವಿ. ಮಂಜು ಹುಂಬಿ (35) ಮೃತರು. ಮನೆಯ ಪಕ್ಕದಲ್ಲಿ ದನದ ಕೊಟ್ಟಿಗೆ ಇದ್ದು, ಪ್ರಭಾಕರ ಬೆಳಗ್ಗೆ ಎದ್ದು ಆಕಳು ಕರುವಿಗೆ ಕಾಳು ತಿನಿಸಲು ಹೋಗಿದ್ದು, ಈ ವೇಳೆ ಮನೆಗೆ ಹೊಂದಿಕೊಂಡಿದ್ದ ವಿದ್ಯುತ್ ಕಂಬದ ಗೈಯ (ತಂತಿ) ಹಿಡಿದಿದ್ದರಿಂದ  ವಿದ್ಯುತ್ ಪ್ರವಹಿಸಿದೆ.  ಮಗ ಮಂಜು ತಂದೆಯ ಸಹಾಯಕ್ಕೆ ಧಾವಿಸಿದ್ದು, ಆತನಿಗೂ ಶಾಕ್ ಹೊಡೆದಿದೆ. ಪ್ರಭಾಕರ ಸ್ಥಳದಲ್ಲೇ ಮೃತಪಟ್ಟರೆ, ಮಗ ಮಂಜು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಘಟನೆ ಬಗ್ಗೆ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net