

ಬೆಳಗಾವಿ : ನಿಗಧಿತ ಅವಧಿಯಂತೆ ಹೆಸ್ಕಾಂ ವಿದ್ಯುತ್ ಸರಬರಾಜು ಮಾಡದೇ ಇರುವರಿಂದ ಜಮೀನಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳಗಾವಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಹಾನಿಯಾಗುವ ಸ್ಥಿತಿಯಲ್ಲಿದ್ದು, ವಿದ್ಯುತ್ ಸರಬರಾಜಿಗೆ ಈ ಕೂಡಲೆ ಕ್ರಮ ಕೈಗೊಳ್ಳಬೇಕೇಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ತಾಲೂಕು ಘಟಕ ಒತ್ತಾಯಿಸಿದೆ.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ‌್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ ಅವರು, ಬೆಳಗಾವಿ ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳಯಲಾಗುತ್ತದೆ. ಈ ವರ್ಷ ಮಳೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಬೊರವೆಲ್, ಬಾವಿ ಇರುವವರು ವಿದ್ಯುತ್ ಮೇಲೆಯೇ ಅವಲಂಬಿತವಾಗಬೇಕಾಗಿದೆ. ಆದರೆ ಹೆಸ್ಕಾ ದವರು ಸರಿಯಾಗಿ ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ನೀಡುಡುತಿಲ್ಲ. ಆದುದ್ದರಿಂದ ಭತ್ತದ ಬೆಳೆಗಳು ನಾಶ ವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಳಗಾವಿ ತಾಲೂಕಿನ ಕಡೊಲಿ, ದೆವಗೆರಿ, ಜಾಫರವಾಡೀ, ಕೆದನೂರ, ಹಾಗೂ ಮಣ್ಣಿಕೈರಿ, ಈ ಗ್ರಾಮದ ಪ್ರದೇಶಗಳಲ್ಲಿ ಅತ್ತಿ ಹೇಚ್ಚಾಗಿ ವಿದ್ಯುತ್ ಸಮಸ್ಯೆಯಾಗಿದೆ. ಕಾರಣ ಕೂಡಲೇ ವಿದ್ಯುತ್ ಪೂರೈಸಲು ಕ್ರಮ ಕೈಗೊಳಬೇಕು ಹಾಗು ಆದ ಹಾನಿಯನ್ನು ಭರಿಸಿಕೊಡಬೇಕೆಂದು ರೈತ ಸಂಘಟನೆಯವರು ಸರಕಾರಕ್ಕೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತರ ಜಮೀನಿ ದಾಖಲೆಗಳ ತಿದ್ದಪಡಿ ವಿಷಯದಲ್ಲಿ ತಲಾಟಿ ಹಾಗೂ ನೋಂದಣಿ ಅಧಿಕಾರಿಗಳ ಮೇಲೆ ನಿಗಾ ಇಡುವಂತೆ ರೈತ ಸಂಘಟನೆಯವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಪ್ಪಾಸಾಹೇಬ ದೇಸಾಯಿ ಸುಭಾಷ ದಾಯಗೊಂಡೆ, ಚಂದ್ರು ರಾಜಾಯಿ, ಮಾರುತಿ ಕಡೇಮನಿ, ದುಂಡಪ್ಪ ಪಾಟೀಲ, ನಾಮದೇವ ದುಡುಮ್ ಸೇರಿದಂತೆ ಇತರರಿದ್ದರು