ಬೆಳಗಾವಿ ಜಿಲ್ಲೆಯಲ್ಲಿ ಅನ್ನಭಾಗ್ಯ ಫಲಾನುಭವಿಗಳ ಖಾತೆ ಸೇರಿದ 46 ಕೊಟಿ ರೂ.

IMG_20230717_204053.jpg
Published on

ಬೆಳಗಾವಿ : ರಾಜ್ಯ ಸರ್ಕಾರ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲು ನೇರ ನಗದು ವರ್ಗಾವಣೆ ಸೌಲಭ್ಯದಡಿ ಜಿಲ್ಲೆಯ 8.29 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಸೋಮವಾರ ಒಟ್ಟು 46,54,18,520 ರೂ.ಜಮೆ ಮಾಡಲಾಗಿದೆ.

ಜಿಲ್ಲೆಯಲ್ಲಿ 68,642 ಅನ್ನ ಅಂತ್ಯೋದಯ ಹಾಗೂ 10,80,929 ಬಿಪಿಎಲ್ ಸೇರಿದಂತೆ ಒಟ್ಟು 11,49,501 ಪಡಿತರ ಚೀಟಿ ಚಾಲ್ತಿಯಲ್ಲಿದ್ದು, ಆ ಪೈಕಿ 8,29,501 ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಗದು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
 

ಪಡಿತರ ಚೀಟಿದಾರರಿಗೆ ಜಮೆ ಮಾಡಿರುವ ಮಾಹಿತಿ
ಪಡಿತರ ಚೀಟಿದಾರರಿಗೆ ಜಮೆ ಮಾಡಿರುವ ಮಾಹಿತಿ

68,230 ಅಂತ್ಯೋದಯ ಚೀಟಿಗಳ ಪೈಕಿ 4 ಸದಸ್ಯರಿರುವವರಿಗೆ ಸರ್ಕಾರದ ಮಾರ್ಗಸೂಚಿಯಂತೆ 170 ರೂ.,  ಐವರು ಸದಸ್ಯರಿಗೆ 510 ರೂ., ಆರು ಜನರಿದ್ದವರಿಗೆ  850 ರೂ., ಹಾಗೂ ಏಳು, ಎಂಟು ಜನ ಸದಸ್ಯರಿದ್ದರೆ ಕ್ರಮವಾಗಿ 1190 ಹಾಗೂ 1530 ರೂ.ಜಮೆ ಮಾಡಲಾಗಿದೆ. ಇನ್ನೂ ಇ-ಕೆವೈಸಿ ಮಾಡಿಸಿದ ಪಡಿತರ ಚೀಟಿದಾರರು ಕೂಡಲೇ ಆಧಾರ ಲಿಂಕ್ ಮಾಡಿಸಿಕೊಳ್ಳಬೇಕು. ಅಂದಾಗ  ಮಾತ್ರ ಮುಂದಿನ ತಿಂಗಳ ಕಂತು ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net