ಸರ್ಕಾರಿ ಶಾಲೆಗೆ ಭೇಟಿ ನೀಡಿದ ಡಯಟ್ ಪ್ರಾಚಾರ್ಯ ಗಾಂಜಿ ಏನಂದ್ರು ಗೊತ್ತಾ?

IMG-20230614-WA0016.jpg
Published on

ಬೆಳಗಾವಿ : ತಾಲೂಕಿನ ಕುಕಡೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಡಿ.ಗಾಂಜಿ ಅವರು ಶಾಲೆಯಲ್ಲಿನ ಶೈಕ್ಷಣಿಕ ವಾತಾವರಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಎಲ್ಲ ಶಿಕ್ಷಕರು ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿ ಮಕ್ಕಳ ಶೈಕ್ಷಣಿಕ ಮಟ್ಟವನ್ನ ಇನ್ನಷ್ಟು ಉನ್ನತ ಮಟ್ಟಕ್ಕೆ ಹೆಚ್ಚಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಎಸ್.ಡಿ.ಗಾಂಜಿ ಸಲಹೆ ನೀಡಿದರು.
 ಪ್ರಸ್ತುತ ವರ್ಷದ ಕಲಿಕೆಗೆ ಮಕ್ಕಳನ್ನು ಅನಿಗೊಳಿಸಲು ಸೇತುಬಂಧ ಕಾರ್ಯಕ್ರಮವನ್ನು ನಿಯಮಾನುಸಾರ ನಿರ್ವಹಿಸಲು ಸೂಚಿಸಿದರು. ಎಲ್ಲ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಸೂಕ್ತ ತಯಾರಿಯನ್ನು ಮಾಡಿಕೊಂಡು ಬೋಧನೆಯಲ್ಲಿ ತೊಡಗುವಂತೆ ಸುಚನೆ ನೀಡಿದರು.

ವರ್ಗ ಕೋಣೆಗಳನ್ನು ಸಂದರ್ಶಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ,ಮಕ್ಕಳು ಉತ್ತರಿಸುವ ವೈಖರಿ,  ಕಲಿಕೋಪಕರಣಗಳ ಪ್ರದರ್ಶನ, ಶಾಲೆಯ ಕೈತೋಟ, ಮಕ್ಕಳಲ್ಲಿನ ಶಿಸ್ತು , ಶಾಲಾ ಆವರಣದ ಸ್ವಚ್ಛತೆ, ಶಿಕ್ಷಕರ ಚಟುವಟಿಕೆ ಯುಕ್ತ  ಬೋಧನೆ, ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಶಿಕ್ಷಕರ ಆಸಕ್ತಿ-ಉತ್ಸಾಹ, ಸಂಘಟಿತ ಕಾರ್ಯ ಹಾಗೂ ಶಿಕ್ಷಕರ ಶ್ರಮ ಹಾಗೂ ಊರಿನ ನಾಗರಿಕರ ಸಹಕಾರ ಪ್ರತಿ ಶಾಲೆಗೂ ಮಾದರಿಯಾಗಿದೆ ಎಂದರು.
 ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಎನ್.ನಾಶಿ, ಎ.ಎಸ್.ಹಂಚಿನಮನಿ, ಎ.ಜಿ.ಮುಲ್ಲಾ, ವಿ.ಎಂ.ಕುಂಬಾರ,ಎನ್.ಬಿ.ದೊಡಮನಿ,
ಎಸ್.ಎಸ್.ಮಳಗಲಿ, ಪಿ.ಎ.ರೊಟ್ಟಿ ಹಾಗೂ ಆರ್.ಬಿ.ಕೊಡ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net