

ಹುಬ್ಬಳ್ಳಿ: ನಗರದ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಪೆರೇಟ್ ರೋಡೀಸ್-ರಾಜ್ಯ ಮಟ್ಟದ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಜಯಿಸಿದೆ.
ಮಂಗಳೂರಿನ ಸೇಂಟ್ ಅಲೋಯಸಿಸ್ ಕಾಲೇಜ್ ರನ್ನರ್ ಅಪ್ ಸ್ಥಾನ ಪಡೆದಿದೆ. ಫಿಜಿಕಲ್ ಮತ್ತು ಇಂಟಲೆಕ್ಚುಲ್ ಎರಡೂ ವಿಭಾಗಗಳಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ಪ್ರಥಮ ಸ್ಥಾನ ಪಡೆದಿತ್ತು. ಹುಬ್ಬಳ್ಳಿಯ ಜೆಜಿ ವಾಣಿಜ್ಯ ಕಾಲೇಜ್ ಫಿಜಿಕಲ್ ವಿಭಾಗದಲ್ಲಿ ದ್ವಿತೀಯ ಹಾಗೂ ಮಂಗಳೂರಿನ ಸೇಂಟ್ ಅಲೋಯಸಿಸ್ ಕಾಲೇಜ್ ಇಂಟಲೆಕ್ಚುಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿತ್ತು.
ಹುಬ್ಬಳ್ಳಿ-ಧಾರವಾಡ, ಗದಗ, ರಾಣೆಬೆನ್ನೂರು, ಬಳ್ಳಾರಿ, ಬೆಳಗಾವಿ, ಮಂಗಳೂರಿನ ಕಾಲೇಜ್ ತಂಡಗಳು ಭಾಗವಹಿಸಿದ್ದವು. ಉದ್ಘಾಟನಾ ಸಮಾರಂಭದಲ್ಲಿ ಪ್ರಾಚಾರ್ಯ ಪ್ರೊ. ರಮಾಕಾಂತ ದಿಯೋಗೊಜಿ, ಶೈಕ್ಷಣಿಕ ಸಂಯೋಜಕ ಪ್ರೊ. ಬಾಸಿತ್ ಬಿನ್ನಾಳ, ಕಾರ್ಯಕ್ರಮ ಸಂಯೋಜಕ ಪ್ರೊ. ಬಸವರಾಜ ಎಸ್.ಜಿ., ರೋಹಿತ ಸಿ. ಅಖಿಲಾ ಕೆ. ಹಾಗೂ ಅಕ್ಷತಾ ಐ. ಇದ್ದರು.
ಮುಕ್ತಾಯ ಸಮಾರಂಭದಲ್ಲಿ ನಟ ಕಿರಣ ರಾಜ್ ಟ್ರೋಫಿ ಮತ್ತು ಪ್ರಮಾಣಪತ್ರ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.