ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Screenshot_2023_0809_105710.png
Published on

ಬೆಳಗಾವಿ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಶಾಸ್ತ್ರಿ ಅವರು 2023–26ನೇ ಸಾಲಿನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ಸಿ.ಕೆ. ಜೋರಾಪೂರ (ಕಾರ್ಯಾಧ್ಯಕ್ಷ), ಬಸವರಾಜ ಗಾರ್ಗಿ (ಪ್ರಧಾನ ಕಾರ್ಯದರ್ಶಿ), ಆನಂದ ಪುರಾಣಿಕ, ಗುಂಡೇನಟ್ಟಿ ಮಧುಕರ, ರಾಜನಂದಾ ಗಾರ್ಗಿ, ಇಂದಿರಾ ಮೊಟೆಬೆನ್ನೂರ, ರಾಜೇಶ್ವರಿ ಹೆಗಡೆ (ಉಪಾಧ್ಯಕ್ಷರು), ಅನ್ನಪೂರ್ಣಾ ಹಿರೇಮಠ (ಖಜಾಂಚಿ), ಎಂ.ಎ. ಪಾಟೀಲ, ಸುನಂದಾ ಮುಳೆ, ಭಾರತಿ ಮಠದ, ಮಮತಾ ಶಂಕರ, ಶೋಭಾ ಬನಶಂಕರಿ, ರಾಜೇಶ್ವರಿ ಹಿರೇಮಠ (ಕಾರ್ಯಕಾರಿ ಸದಸ್ಯರು) ನೇಮಕವಾಗಿದ್ದಾರೆ.

ರಜತಮಹೋತ್ಸವ ವರ್ಷದಲ್ಲಿರುವ ಜಿಲ್ಲಾ ಚುಸಾಪ ಗೌರವ ಸಲಹಾ ಮಂಡಳಿಯಲ್ಲಿ ಹಿರಿಯ ಕವಿ ಜಿನದತ್ತ ದೇಸಾಯಿ, ಪಿ.ಬಿ. ಸ್ವಾಮಿ, ಬಿ.ಎಸ್. ಗವಿಮಠ, ಬಸವರಾಜ ಜಗಜಂಪಿ, ಎಚ್.ಐ. ತಿಮ್ಮಾಪುರ, ಪ್ರೊ.ಎಂ.ಎಸ್. ಇಂಚಲ, ನೀಲಗಂಗಾ ಚರಂತಿಮಠ ಮತ್ತು ಪಿ.ಜಿ. ಕೆಂಪಣ್ಣವರ ಮಾರ್ಗದರ್ಶನ ಮಾಡಲಿದ್ದಾರೆ. ನಿರ್ದೇಶಕ ಮಂಡಳಿ ಸದಸ್ಯರಾಗಿ ಎ.ಎ.ಸನದಿ, ಆರ್.ಬಿ. ಕಟ್ಟಿ, ಅಶೋಕ ಮಳಗಲಿ, ದೀಪಿಕಾ ಚಾಟೆ, ಚಂದ್ರಶೇಖರ ನವಲಗುಂದ, ಮುರುಗೇಶ ಶಿವಪೂಜಿ ಕಾರ್ಯ ನಿರ್ವಹಿಸಲಿದ್ದಾರೆ.

ಆಗಸ್ಟ್‌ 27ರಂದು ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ. ಅದೇ ದಿನ ಜಿಲ್ಲಾ ಮಟ್ಟದ ಚುಟುಕು ವಾಚನ ಸ್ಪರ್ಧೆ ಕೂಡ ನಡೆಯಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net