ಪತ್ನಿಕೊಂದ ಪತಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ 7ನೇ ಜೆಎಂಎಫ್ ನ್ಯಾಯಾಲಯ

Karnataka_High_Court-1600x900.jpg
Published on

ಬೆಳಗಾವಿ : ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಸೇರಿ ನಾಲ್ವರ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗಳೆಂದು ಪರಿಗಣಿಸಿ ನಾಲ್ವರಿಗೂ ಚಿಕ್ಕೋಡಿಯಲ್ಲಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕಾಗವಾಡ ತಾಲ್ಲೂಕಿನ ಉಗಾರ ಖುರ್ದ್‌ನ ಸದ್ದಾಮ್‌ ಬಾಗೆ, ವಿನಾಯಕ ವಾಡಿಯ ಆಫ್ರೀನ್‌ ನಾಗನೂರೆ, ಶೈನಾಜ್ ನಾಗನೂರೆ, ಸುಲ್ತಾನ್‌ ನಾಗನೂರ ಶಿಕ್ಷೆಗೆ ಗುರಿಯಾದವರು.

2020ರ ಏಪ್ರಿಲ್‌ನಲ್ಲಿ ಉಗಾರ ಖುರ್ದ್‌ನ ಸದ್ದಾಮ್‌ ಬಾಗೆ ಮತ್ತು ಐನಾಪುರದ ಸುಮಯ್ಯ ಮುಲ್ಲಾ ವಿವಾಹವಾಗಿದ್ದರು. ಆದರೆ, ಈ ಆರೋಪಿಗಳು ಸದ್ದಾಮ್‌ಗೆ ಮತ್ತೊಂದು ವಿವಾಹ ಮಾಡುವ ದುರದ್ದೇಶ ಹೊಂದಿದ್ದರು. ಹಾಗಾಗಿ ಗರ್ಭಿಣಿಯಾಗಿದ್ದ ಸುಮಯ್ಯ ಅವರನ್ನು 2020ರ ಡಿ.17 ರಂದು ಕೊಲೆ ಮಾಡಿದ ಕುರಿತು ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್‌.ಎಲ್‌.ಚವ್ಹಾಣ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ವಕಾಲತ್ತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net