

ಬೆಳಗಾವಿ: ಗಣೇಶೋತ್ಸವ ಸಿದ್ಧತೆ ಪೂರ್ವಭಾವಿ ಸಭೆಗಳಿಗೆ ಮೇಯರ್, ಉಪಮೇಯರ್, ಸದಸ್ಯರನ್ನು ಕಡೆಗಣಿಸಿ ಸರ್ವಾಧಿಕಾರಿ ರ್ನಿಣಯ ತೆಗೆದುಕೊಳ್ಳುತ್ತಿರುವ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ, ರಾಜ್ಯಪಾಲರಿಗೆ ದೂರು ಸಲ್ಲಿಸಲು ಸೋಮವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸದಸ್ಯರು ಒಕ್ಕೊರಲ ರ್ನಿಣಯ ಕೈಗೊಂಡರು.
ನೂರಾರು ವರ್ಷಗಳಿಂದ ಬೆಳಗಾವಿಯಲ್ಲಿ ವಿಜೃಂಭಣೆಯಿಂದ 11 ದಿನಗಳ ಕಾಲ ಗಣೇಶೋತ್ಸವ ಜರುಗುತ್ತದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಲಾಂತರ ಜನರು ಗಣೇಶೋತ್ಸವ, ವಿಸರ್ಜನೆ ಮೆರವಣಿಗೆ ವೀಕ್ಷಿಸಲು ಬರುತ್ತಾರೆ. ಪಾಲಿಕೆಯು ರಸ್ತೆ ದುರಸ್ತಿ, ಹೊಂಡಗಳ ನವೀಕರಣ ಸೇರಿ ವಿವಿಧ ಕಾಮಗರಿಗಳಿಗಾಗಿ 60 ಲಕ್ಷ ರೂ. ವರೆಗೆ ಖರ್ಚು ಮಾಡುತ್ತಿದೆ. ಆದರೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಏಕಪಯವಾಗಿ ಸಭೆ ನಡೆಸಿ, ಗಣೇಶೋತ್ಸವ ಸಂದರ್ಭದಲ್ಲಿ ಪಾಲಿಕೆಯಿಂದ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ೂಷಿಸಿದ್ದಾರೆ. ಇದರಿಂದ ಮೇಯರ್ ಮಂಗೇಶ ಪವಾರ್, ಪಾಲಿಕೆ ಸದಸ್ಯರ ಒಮ್ಮತದ ರ್ನಿಣಯ ಮೇರೆಗೆ ರಾಜ್ಯಪಾಲರಿಗೆ, ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆ ಸಚಿವರಿಗೆ ಪತ್ರದ ಮೂಲಕ ದೂರು ಸಲ್ಲಿಸುವುದು. ರಾಜ್ಯಪಾಲರ ಬಳಿ ನಿಯೋಗ ತೆಗೆದುಕೊಂಡು ಹೋಗುವುದು. ರಾಜ್ಯಭವನ, ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸುವ ರ್ನಿಣಯ ಪಾಸ್ ಮಾಡಿದರು. ಉಪಮೇಯರ್ ವಾಣಿ ಜೋಶಿ ಇತರರಿದ್ದರು.
ನಗರದ ಕುಮಾರಗಂಧರ್ವ ಕಲಾಮಂದಿರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧ್ಯಕ್ಷತೆಯಲ್ಲಿ ಗಣೇಶೋತ್ಸವ ಪೂರ್ವಭಾವಿ ಸಭೆ ಜರುಗಿತು. ಮೇಯರ್, ಉಪಮೇಯರ್ಗೆ ಆಹ್ವಾನಿಸದಿರುವ ವಿಷಯ ಆ ಮೇಲೆ ಗೊತ್ತಾಯಿತು. ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಕುರಿತು ನಮ್ಮೊಂದಿಗೆ ಚರ್ಚಿಸಿಲ್ಲ. ಶುಭ ಬಿ., ಪಾಲಿಕೆ ಆಯುಕ್ತೆ