

ಹುಕ್ಕೇರಿ: ತಾಲೂಕಿನ ಬೆಳವಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಲಿಂಗರಾಜ ನಾಯಿಕ ಅವಿರೋಧವಾಗಿ ಆಯ್ಕೆಯಾದರು.
ಪಿಕೆಪಿಎಸ್ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ನಾಯಿಕ ಮತ್ತು ಅಪ್ಪಾಸಾಹೇಬ ಸಾರಾಪೂರೆ ನಾಮಪತ್ರ ಸಲ್ಲಿಸಿದ್ದರು. ಅಪ್ಪಾಸಾಹೇಬ ಸಾರಾಪೂರೆ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಲಿಂಗರಾಜ ನಾಯಿಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಗೋವಿಂದಗೌಡ ಪಾಟೀಲ ಘೋಷಿಸಿದರು. ಸಹಾಯಕರಾಗಿ ಬಸಗೌಡ ಮಗದುಮ್ಮ ಕಾರ್ಯ ನಿರ್ವಹಿಸಿದರು.
ಉಪಾಧ್ಯಕ್ಷ ಅಪ್ಪಾಸಾಹೇಬ ಸಾರಾಪೂರೆ, ನಿರ್ದೇಶಕರಾದ ಮಹಾದೇವ ನಾಯಿಕ, ಭೀಮಗೌಡ ಮಗದುಮ್ಮ, ರಾಮಣ್ಣ ತೇರದಾಳಿ, ಬಸವರಾಜ ಚಿಕ್ಕಣಗಿ, ಶಿವಶಂಕರ ಹಾರುಗೇರಿ, ಶಂಕರ ಶಿಡ್ಲೆಪ್ಪಗೋಳ, ಮುಖಂಡರಾದ ಎಂ.ಬಿ.ನಾಯಿಕ, ಅಜಿತ ನಾಯಿಕ, ಹೊನ್ನಪ್ಪ ನಾಯಿಕ, ಭಾಪು ನಾಯಿಕ, ಶಿವನಾಯಿಕ ನಾಯಿಕ, ಸಾತಪ್ಪ ನಾಯಿಕ, ಸಂಜೀವ ಚಿಕ್ಕೋಡಿ, ವಿಶ್ವನಾಥ ಚಿಕ್ಕೋಡಿ, ಸಂಜೀವ ನಾಯಿಕ, ಭರಮಣ್ಣ ನಾಯಿಕ, ಅಶೋಕ ನಾಯಿಕ, ಪುಲಕೇಶಿ ನಾಯಿಕ, ಸದಾಶಿವ ಶೇಂದ್ರಿ, ಅಶೋಕ ಬಾಳಿಕಾಯಿ, ವಿಠ್ಠಲ ಅವುಬಾಯಿಗೋಳ ಇತರರು ಇದ್ದರು.