ಬೆಳಸೆ ಶಾಲೆ ಸುವರ್ಣ ಮಹೋತ್ಸವ 29ರಿಂದ

Belase
Published on

ಅಂಕೋಲಾ: ತಾಲೂಕಿನ ಬೆಳಸೆ ಆರ್‌ಪಿಎಸ್ ಸೆಕೆಂಡರಿ ಸ್ಕೂಲ್‌ನ ಸುವರ್ಣ ಮಹೋತ್ಸವವನ್ನು ಡಿ. 29 ಮತ್ತು 30 ರಂದು ಆಚರಿಸಲಾಗುವುದು ಎಂದು ರೂರಲ್ ಪ್ರೊಗ್ರೆಸಿವ್ ಸೊಸೈಟಿ ಅಧ್ಯಕ್ಷ ಪ್ರಕಾಶ ಪ್ರಭು ಹೇಳಿದರು.

ಶಾಲೆಯ ಕಚೇರಿಯಲ್ಲಿ ಗುರುವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 29ರಂದು ಬೆಳಗ್ಗೆ 10.30 ಗಂಟೆಗೆ ಸಮಾರಂಭವನ್ನು ಕುಮಟಾ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ್ ಉದ್ಘಾಟಿಸುವರು. ಹೊಸಪೇಟೆಯ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಚಾರ್ಯೆ ಡಾ. ಸಂಗೀತಾ ಗಾಂವಕರ ಸ್ಮರಣ ಸಂಚಿಕೆ ಅನಾವರಣಗೊಳಿಸಲಿದ್ದಾರೆ. ಬೆಳಗಾವಿಯ ಯಶಿಕಾ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಪಾರ್ಟನರ್ ಶಿರೀಷ್ ಹಸ್ತಪ್ರತಿಯನ್ನು ಅನಾವರಣಗೊಳಿಸಲಿದ್ದಾರೆ. ನಾಟಿ ವೈದ್ಯ ಹನುಮಂತ ಬಿ. ಗೌಡ ಅವರನ್ನು ಸನ್ಮಾನಿಸಲಾಗುವುದು. ಸಂಜೆ 4 ಗಂಟೆಗೆ ರಾಷ್ಟ್ರ ಮಟ್ಟದ ಗಾಯನ ಸ್ಪರ್ಧೆ ನಡೆಯಲಿದೆ ಎಂದರು.

30ರಂದು ಸಂಜೆ 4.30ಕ್ಕೆ ಸಮಾರೋಪ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಪಿ.ಎಂ. ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ, ಪುರಸಭೆ ಸದಸ್ಯ ಪ್ರಕಾಶ ಎಸ್.ಗೌಡ ಪಾಲ್ಗೊಳ್ಳುವರು. ಪ್ರಕಾಶ ಎಸ್.ಪ್ರಭು ಅಧ್ಯಕ್ಷತೆ ವಹಿಸುವರು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಮಾರುತಿ ಗೌಡ, ಕಾರ್ಯದರ್ಶಿ ಶಿವಾನಂದ ಆಗೇರ, ಮುಖ್ಯಾಧ್ಯಾಪಕಿ ಕಲ್ಪನಾ ಗಾಂವಕರ, ಶಿಕ್ಷಕರಾದ ಮೃತ್ಯುಂಜಯ ತಳವಾರ, ಆನಂದ ಗೌಡ, ನಾಗೇಂದ್ರ ಗೌಡ, ಸುಧಾ ಆಚಾರಿ, ಎಂ. ಅಕ್ಷತಾ, ಸುಧೀರ ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net