

ಬೆಳಗಾವಿ: ಬೆಳಗಾವಿ ಮತ್ತು ಮಿರಜ್ ಪಟ್ಟಣಗಳ ಮಧ್ಯೆ ಸದ್ಯ ಓಡಾಡುತ್ತಿರುವ ರೈಲು ಸಂಖ್ಯೆ 07301/07302 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 07303/07304 ಬೆಳಗಾವಿ–ಮೀರಜ್–ಬೆಳಗಾವಿ ಕಾಯ್ದಿರಿಸದ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಕಾಯಂಗೊಳಿಸಿ, ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಈ ವಿಶೇಷ ರೈಲು ಸೇವೆಗಳು ಕಾಯಂಗೊಂಡ ಹಿನ್ನೆಲೆಯಲ್ಲಿ ಇವುಗಳ ಸಂಖ್ಯೆಯೂ 51461/51462 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 51463/51464 ಬೆಳಗಾವಿ–ಮೀರಜ್–ಬೆಳಗಾವಿ ಎಂದು ಬದಲಾಯಿಸಲಾಗಿದೆ.
ರೈಲು ಸಂಖ್ಯೆ 51461 ಬೆಳಗಾವಿ-ಮೀರಜ್ ಡೈಲಿ ಪ್ಯಾಸೆಂಜರ್ ಬೆಳಗಾವಿಯಿಂದ ನಿತ್ಯ ಬೆಳಿಗ್ಗೆ 5.45ಕ್ಕೆ ಹೊರಟು, ಅದೇ ದಿನ ಬೆಳಿಗ್ಗೆ 9ಕ್ಕೆ ಮಿರಜ್ ತಲುಪಲಿದೆ. ವಾಪಸ್ಸ ರೈಲು ಸಂಖ್ಯೆ 51462 ಮೀರಜ್-ಬೆಳಗಾವಿ ಡೈಲಿ ಪ್ಯಾಸೆಂಜರ್ ಮಿರಜ್ ನಿಂದ ಬೆಳಿಗ್ಗೆ 09.55ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 1ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 51463 ಮಧ್ಯಾಹ್ನ 1:30ಕ್ಕೆ ಬೆಳಗಾವಿಯಿಂದ ಹೊರಟು, ಅದೇ ದಿನ ಸಂಜೆ 4.30ಕ್ಕೆ ಮೀರಜ್ ತಲುಪಲಿದೆ. ವಾಪಸ್ಸು, ರೈಲು ಸಂಖ್ಯೆ 51464 ಸಂಜೆ 7.10ಕ್ಕೆ ಹೊರಟು ಅದೇ ದಿನ ರಾತ್ರಿ 10.25ಕ್ಕೆ ಬೆಳಗಾವಿ ತಲುಪಲಿದೆ.
ಈ ಕಾಯಂ ರೈಲು ಸೇವೆಗಳು ಅ.15ರಿಂದ ಜಾರಿಗೆ ಬರಲಿವೆ ಎಂದು ಪ್ರಕಟಣೆ ತಿಳಿಸಿದೆ.