

ಸಾರಾಯಿ ಸೇವಿಸಿ ಕರ್ತವ್ಯ ನಿರ್ವಹಣೆ
| ಸಾರ್ವಜನಿಕರಿಂದ ಪೊಲೀಸ್ ಸಿಬ್ಬಂದಿಗೆ ತರಾಟೆ
ಚಿಕ್ಕೋಡಿ: ವಾಹನ ಸವಾರರನ್ನು ತಡೆದು ಮದ್ಯಪಾನ ಸೇವೆನೆ ತಪಾಸಣೆ ನಡೆಸುವ ಸಂಚಾರಿ ಪೊಲೀಸ್ ಸಿಬ್ಬಂದಿಯೇ ಸಾರಾಯಿ ಸೇವೆಸಿ ಕರ‍್ಯನಿರ್ವಹಣೆ ಮಾಡುತ್ತಿದ್ದ ವೇಳೆ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಅಂಕಲಿಖೂಟ ಬಳಿ ಸೋಮವಾರ ನಡೆದಿದೆ.
ಪಟ್ಟಣದ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ವೈ ಎಂ ಪಾಟೀಲ ಕರ್ತವ್ಯದ ವೇಳೆಯಲ್ಲಿಯೇ ಸಾರಾಯಿ ಸೇವಿಸಿ ಕೆಲಸ ನಿರ್ವಹಿಸಿದ್ದು, ಅದು ಕೂಡ ದ್ವಿಚಕ್ರ ವಾಹನರನ್ನು ತಡೆದು ಮದ್ಯ ಸೇವೆನೆ ಮಾಡಿರುವುದರ ಕುರಿತು ತಪಾಸಣೆ ಮಾಡುವಾಗ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನೀಸಿದ್ದಾರೆ.
ಸಾರ್ವಜನಿಕರು ಮದ್ಯಪಾನ ಮಾಡಿ ವಾಹನ ಚಾಲಾವಣೆ ಮಾಡಿದರೆ ತಪ್ಪು. ಆದರೆ ಪೊಲೀಸ್‌ರು ಸಂಚಾರಿ ನಿಯಮ ಉಲಂಘಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಯುವಕರು ಪ್ರಶ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.