

ಬೆಳಗಾವಿ'ಯಲ್ಲಿ ಕಳೆಗಟ್ಟಿದ ರಾಜ್ಯೋತ್ಸವ ಸಂಭ್ರಮ
- ಹುಚ್ಚೆದ್ದು ಕುಣಿದ ಯುವ ಜನತೆ | ಚನ್ನಮ್ಮ ವೃತ್ತದಲ್ಲಿ ಜನ ಜಾತ್ರೆ |
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗಡಿನಾಡು ಕುಂದಾನಗರಿ ಬೆಳಗಾವಿಯಲ್ಲಿ ಭಾನುವಾರ ಜರುಗಿದ ೭೧ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಕಣ್ಣು ಹಾಯಿಸಿದಲ್ಲೆಲಾ ಜನರ ಕನ್ನಡಾಭಿಮಾನ ಮುಗಿಲು ಮುಟ್ಟಿತ್ತು. ಕೆಂಪು-ಹಳದಿ ಬಾವುಟಗಳಿಂದ ಅಲಕೃತಗೊಂಡ ನಗರದ ಬೀದಿಗಳು, ಕನ್ನಡ ಗೀತೆಗಳ ಸದ್ದು ನೋಡುಗರನ್ನು ಆಕರ್ಷಿಸಿಸಿದ್ದು, ಪ್ರತಿ ವರ್ಷದಂತೆ ಈ ವರ್ಷವು ರಾಜ್ಯೋತ್ಸವ ಸಂಭ್ರಮಕ್ಕೆ ೪ ಲಕ್ಷಕ್ಕೂ ಅಽಕ ಜನರು ಸಾಕ್ಷಿಯಾದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ ಮತ್ತು ಮಹಾನಗರ ಪಾಲಿಕೆ ಆಯೋಜಿಸಿದ್ದ ಕರ್ನಾಟಕ ರಾPಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪೂಜೆ ನೆರವೇರಿಸಿ ಮೆರವಣಿಗೆ ಚಾಲನೆ ನೀಡಿದರು.
ಕುಂದಾನಗರಿಯ ಚನ್ನಮ್ಮ ವೃತ್ತದಲ್ಲಿ ಶನಿವಾರ ಮಧ್ಯರಾತ್ರಿಯಿಂದಲೇ ಆರಂಭಗೊAಡ ಕನ್ನಡ ರಾಜ್ಯೋತ್ಸವ ಸಂಭ್ರಮ ಭಾನುವಾರ ಎಲ್ಲೆಲ್ಲೂ ಕನ್ನಡದ ಕಂಪು- ಕಲರವ. ಹಳದಿ- ಕೆಂಪು ಬಣ್ಣದ ಕನ್ನಡದ ಧ್ವಜಗಳ ಹಾರಾಟ, ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಅವರಿಗೆ ಜಯಕಾರದ ಘೋಷಣೆಗಳ ಅಬ್ಬರ ಮುಗಿಲು ಮುಟ್ಟಿತು.ಭುವನೇಶ್ವರಿಯನ್ನ ಹೊತ್ತ ನಾಡಿನ ಕಲೆ,ಸಾಹಿತ್ಯ,ಸಂಸ್ಕೃತಿ ಬಿಂಬಿಸುವ ೧೦೦ಕ್ಕೂ ಅಽಕ ರೂಪಕ ವಾಹನಗಳ ಮೆರವಣಿಗೆ ನೋಡುಗರ ಗಮನ ಸೆಳೆಯುತ್ತಿದ್ದವು.
ಬೆಳಗಾವಿ ಜಿಲ್ಲೆ ಮಾತ್ರವಲ್ಲದೇ ಬಾಗಲಕೋಟೆ, ವಿಜಯಪುರ, ಬೆಂಗಳೂರು ಮಹಾನಗರ, ಮಂಡ್ಯ, ಮೈಸೂರು, ಚಿತ್ರದುರ್ಗ, ಧಾರವಾಡ, ಹಾವೇರಿ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕನ್ನಡಿಗರು ರಾಜ್ಯೋತ್ಸವ ಮೆರವಣಿಗೆ ಭಾಗವಹಿಸಿ ಸಂಭ್ರಮಿಸಿದರು. ಡಿಜೆ ಸಂಗೀತದ ತಾಳಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಬಾಕ್ಸ್
ಕರಾಳ ದಿನಾಚರಣೆಗೆ ಸಿಗದ ಬೆಂಬಲ:
ರಾಜ್ಯದಲ್ಲಿ ರಾಜ್ಯೋತ್ಸವ ಸಂಭ್ರಮದ ನಡುವೇ ತನ್ನ ಹಳೆ ಚಾಳಿ ಮುಂದುವರೆಸಿರುವ ನಾಡ ವಿರೋಽ ಧೋರಣೆ ಹೋಂದಿರುವ ಮಹಾರಾಷ್ಟç ಏಕೀಕರಣ ಸಮಿತಿ(ಎಂಇಎಸ್) ನಗರದಲ್ಲಿ ಆಯೋಜಿಸಿದ್ದ ಕರಾಳ ದಿನದ ರ್ಯಾಲಿಗೆ ಬೆಂಬಲ ಸಿಗದೆ ಮಖಭಂಗ ಅನುಭವಿಸಿದೆ. ಜಿಲ್ಲಾಡಳಿದ ದಿಟ್ಟ ನಿರ್ಧಾರದಿಂದ ಕರಾಳ ದಿನಕ್ಕೆ ಜನ ಇಲ್ಲದೇ ಕಳೆ ಕಳೆದುಕೊಂಡಿತು.
..................
ಬಾಕ್ಸ್
ಕನ್ನಡ ಹೋರಾಟಗಾರರ ಬಂಧನ,ಬಿಡುಗಡೆ
ಕನ್ನಡ ರಾಜ್ಯೋತ್ಸವ ವಿರುದ್ದವಾಗಿ ಮಹಾರಾಷ್ಟç ಏಕೀಕರಣ ಸಮಿತಿ (ಎಂಇಎಸ್) ಹಮ್ಮಿಕೊಂಡಿದ್ದ ಕರಾಳ ದಿನ ರ್ಯಾಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ರ್ಯಾಲಿ ತಡೆಯಲು ಮುಂದಾದ ಕರವೇ ಶಿವರಾಮೆಗೌಡ ಬಣದ ಕಾರ್ಯಕರ್ತರನ್ನು ಪೊಲೀಸ್ರು ವಶಕ್ಕೆ ಪಡೆದು, ನಂತರ ಬಿಡಗಡೆಗೊಳಿಸಿದರು.
ಬಾಕ್ಸ್
ಬೆಳಗಾವಿ ಗಡಿಯಲ್ಲಿ ಮಹಾ ಪುಂಡರಿಗೆ ಬ್ರೇಕ್ :
ಕರ್ನಾಟಕ ರಾಜ್ಯೋತ್ಸವ ವಿರೋಽಸಿ ಬೆಳಗಾವಿ ನಗರದಲ್ಲಿ ಎಂಈಎಸ್ ನಡೆಸುವ ಕರಾಳ ದಿನ ಆಚರಣೆಯಲ್ಲಿ ಭಾಗಿಯಾಗಲು ಬೆಳಗಾವಿಗೆ ಆಗಮಿಸುತ್ತಿದ್ದ ಮಹಾರಾಷ್ಟçದ ಶಿವಸೇನೆ( ಉದ್ಧವ ಠಾಕ್ರೆ ಬಣದ)ಕಾರ್ಯಕರ್ತರನ್ನು ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್ನಲ್ಲಿ ತಡೆದು ನಿಪ್ಪಾಣಿ ಪೊಲೀಸರು ಶಿವಸೇನೆ ಮುಖಂಡ ವಿಜಯ ದೇವನೆ,ವಿರಾಜ ಪಾಟೀಲ,ಸಾಗರ ಪಾಟೀಲ ಸೇರಿ ೧೦ಕ್ಕೂ ಅಽಕ ಜನರನ್ನು ವಶಕ್ಕೆ ಪಡೆದು, ಗಡಿಯಲ್ಲಿ ಮಹಾ ಪುಂಡರಿಗೆ ಬ್ರೇಕ್ ಹಾಕಿದ್ದಾರೆ.