ಬೆಳಗಾವಿ ಗ್ರಾಮಗಳಿಗೆ ನಗರ ಭಾಗ್ಯ!

-ಗ್ರಾಮಗಳ ಸ್ವಾಯತ್ತತೆಗೆ ಗ್ರಾಪಂಗಳ ಆತಂಕ
Gram Panchayats are concerned about the autonomy of villages.
ಮಿನಿ ಟೌನ್‌ಶಿಪ್‌
Published on: 

ಬೆಳಗಾವಿ :ಜನಸಂಖ್ಯೆ ಹೆಚ್ಚಳ, ವಸತಿ ಬೇಡಿಕೆ, ಕೈಗಾರಿಕೆಗಳ ವಿಸ್ತರಣೆ ಹಾಗೂ ಮೂಲಸೌಕರ್ಯದ ಮೇಲಿನ ಒತ್ತಡ ತಗ್ಗಿಸಲು ಮಹಾನಗರದ ಸುತ್ತಲಿನ ಅಂದಾಜು 50 ಗ್ರಾಮಗಳಿಗೆ ‘ನಗರ ಭಾಗ್ಯ’ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.

ಹೌದು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ, ವಾಣಿಜ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಉದ್ಯೋಗದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ಮತ್ತೊಂದೆಡೆ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿರುವದರಿಂದ ವಸತಿ, ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಮಹಾನಗರ ಪಾಲಿಕೆಗೆ ಸವಾಲಾಗಿದೆ. ಈ ಹಿನ್ನೆಲೆ ನಗರ ಸುತ್ತಲಿನ 50 ಗ್ರಾಮಗಳಲ್ಲಿ ಮಿನಿ ಟೌನ್‌ಶಿಪ್‌ಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ.

ಈಗಾಗಲೇ ನಗರಾಭಿವೃದ್ಧಿ ಇಲಾಖೆಯು 2021ರಲ್ಲಿಯೇ ಮಾಸ್ಟರ್ ಪ್ಲಾನ್ ಯೋಜನೆ ಅಡಿಯಲ್ಲಿ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ) ವ್ಯಾಪ್ತಿಗೆ ಬೆಳಗಾವಿ ತಾಲೂಕಿನ ಹಳ್ಳಿಗಳನ್ನು ಸೇರ್ಪಡೆ ಮಾಡಿದ್ದು, ಪ್ರತಿಯೊಂದು ವಾಣಿಜ್ಯ, ವಸತಿ ಯೋಜನೆಗಳಿಗೆ ಬುಡಾ ಒಪ್ಪಿಗೆ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆದಿಂದ 10 ಕಿಮೀ ಸುತ್ತಮುತ್ತಲಿನ ಪ್ರದೇಶದಲ್ಲಿ 100 ರಿಂದ 150 ಎಕರೆ ಪ್ರದೇಶದಲ್ಲಿ ಮಿನಿ ಟೌನ್‌ಶಿಪ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ಭೂಮಿ ಗುರುತಿಸುವ ಕೆಲಸ ಆರಂಭಿಸಿದೆ. ಈ ವಿಸ್ತರಣೆಯ ಉದ್ದೇಶ ಕೇವಲ ನಗರ ಗಡಿಯನ್ನು ಹೆಚ್ಚಿಸುವುದಲ್ಲ. ಭವಿಷ್ಯದಲ್ಲಿ ರೂಪುಗೊಳ್ಳಬಹುದಾದ ವಸತಿ ಬಡಾವಣೆಗಳು, ಕೈಗಾರಿಕಾ ವಲಯಗಳು ಹಾಗೂ ವಾಣಿಜ್ಯ ಪ್ರದೇಶಗಳನ್ನು ಮುಂಚಿತವಾಗಿಯೇ ಯೋಜಿತ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961ರ ಕಲಂ 4(ಎ) ಅನ್ವಯ, ಬೆಳಗಾವಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಹೆಚ್ಚುವರಿಯಾಗಿ ಗ್ರಾಮಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಒಟ್ಟು ಬೆಳಗಾವಿ ತಾಲೂಕಿನ ಗ್ರಾಮಗಳನ್ನು ಯೋಜನಾ ವ್ಯಾಪ್ತಿಗೆ ಸೇರಿಸುವ ಉದ್ದೇಶ ಹೊಂದಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಇಂಜಿನಿಯರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

...........................

ಬಾಕ್ಸ್

ಬೆಳಗಾವಿ ಗ್ರಾಪಂಗಳು ವಿಲೀನ

ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿರುವ 30 ಕ್ಕೂ ಅಧಿಕ ಹಳ್ಳಿಗಳಲ್ಲಿ ಒಟ್ಟು ಕೃಷಿ ಭೂಮಿಯಲ್ಲಿ ಶೇ.62 ರಷ್ಟು ಭೂಮಿ ವಸತಿ ಬಾಡವಣೆ, ವಾಣಿಜ್ಯ, ಕೈಗಾರಿಕೆ ಹಾಗೂ ಇತರೆ ಉದ್ದೇಶಗಳಿಗಾಗಿ ಬಳಕೆ ಯಾಗುತ್ತಿದೆ. ಕೃಷಿ ಚಟುವಟಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಬಹುತೇಕ ಗ್ರಾಪಂಗಳಲ್ಲಿ ವ್ಯಾಣಿಜ್ಯ ವಹಿವಾಟ ಕೂಡ ಹೆಚ್ಚಳವಾಗಿದೆ. ಮತ್ತೊಂದೆಡೆ ಗ್ರಾಮಗಳಲ್ಲಿ ಹೊಸ ಬಡಾವಣೆಗಳ ನಿರ್ಮಾಣ, ಕಟ್ಟಡಗಳ ವಿನ್ಯಾಸ, ಕೈಗಾರಿಕೆಗಳ ಸ್ಥಾಪನೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಅನುಮತಿಗಳ ವಿಚಾರದಲ್ಲಿ ಬುಡಾ ವ್ಯಾಪ್ತಿಯಲ್ಲಿವೆ. ಹೀಗಾಗಿ ಗ್ರಾಪಂಗಳನ್ನು ವಿಲೀನ ಮಾಡಿ ನಗರಸಭೆ, ಪುರಸಭೆ ರಚನೆ ಮಾಡುವ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎನ್ನುತ್ತಾರೆ ಬುಡಾ ಅಧಿಕಾರಿಗಳು.

..................................

ಬಾಕ್ಸ್

ಸರ್ಕಾರಕ್ಕೆ ತೆರಿಗೆ ಆದಾಯ ಹೆಚ್ಚಳ

ಮಹಾನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಆರೋಗ್ಯ, ಸಾರಿಗೆ,ವಾಣಿಜ್ಯ, ಶಿಕ್ಷಣ, ವ್ಯಾಪಾರ ವಹಿವಾಟು ಚಟುವಟಿಕೆಗಳನ್ನು ಉತ್ತೇಜಿಸಲು ಮಿನಿ ಟೌನ್‌ಶಿಪ್‌ಗಳ ನಿರ್ಮಾಣದಿಂದ ಸರ್ಕಾರಕ್ಕೆ ತೆರಿಗೆ ಆದಾಯ ಪ್ರಮಾಣ ಹೆಚ್ಚಳವಾಗಿದೆ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಷಿಕ 50ಕೋಟಿ ರೂ. ವರೆಗೆ ಹೆಚ್ಚುವರಿ ತೆರಿಗೆ ಬರಲಿದೆ ಎಂದು ಜಿಪಂ ಮಾಜಿ ಸದಸ್ಯರು ತಿಳಿಸಿದ್ದಾರೆ.

ಕೋಟ್ಸ್

ಮಹಾನಗರ ಹೊರ ವಲಯದ ಗ್ರಾಮೀಣ ಭಾಗದಲ್ಲಿ ಮಿನಿ ಟೌನ್‌ಶಿಪ್‌ಗಳನ್ನು ನಿರ್ಮಾಣ ಪ್ರಸ್ತಾವನೆ ಸರ್ಕಾರ ಮಟ್ಟದಲ್ಲಿದೆ.ಈಗಾಗಲೇ ಬುಡಾ ಯೋಜನಾ ವ್ಯಾಪ್ತಿಗೆ 58 ಹಳ್ಳಿಗಳ ಸೇರ್ಪಡೆ ಆಗಿದ್ದರಿಂದ ಪ್ರತಿಯೊಂದು ಪರವಾನಗಿ ಬುಡಾದಿಂದ ಪಡೆದುಕೊಳ್ಳುತ್ತಿದ್ದಾರೆ.

-ಶಕೀಲ್ ಅಹ್ಮದ್, ಬುಡಾ ಆಯುಕ್ತ

.................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net