ನಿಪ್ಪಾಣಿ ತಹಶಿಲ್ದಾರರ ಸುರೇಶ ಮುಂಜೆ ಕಚೇರಿ,ಮನೆ ಲೋಕಾ ದಾಳಿವಿಜಯವಾಣಿ ಸುದ್ದಿಜಾಲ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ನಿಪ್ಪಾಣಿ ತಹಶೀಲ್ದಾರ ಸುರೇಶ್ ಮುಂಜೆ ಅವರ ಮನೆ ಹಾಗೂ ಕಚೇರಿ ಮೇಲೆ ಬುಧವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ನಿಪ್ಪಾಣಿ ತಹಶಿಲ್ದಾರ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುರೇಶ ಮುಂಜೆ ಅವರ ನಿಪ್ಪಾಣಿ ಪಟ್ಟಣದ ಮನೆ, ಅಥಣಿ ಪಟ್ಟಣದ ಮನೆ ಹಾಗೂ ಮೂಡಲಗಿ ಪಟ್ಟಣದಲ್ಲಿರುವ ಅವರ ಮಾವನ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದು,ತಹಶಿಲ್ದಾರ ಸುರೇಶ ಮುಂಜೆ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.