

ಯುವಕರು ಧರ್ಮದ ರಕ್ಷಣೆಗೆ ಮುಂದಾಗಲಿ
| ವಿ.ಪ ಮಾಜಿ ಸದಸ್ಯ ಕವಟಗಿಮಠ ಕರೆ | ಚಿಂಚಣಿಯಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಧರ್ಮೊ ರಕ್ಷಿತ ರಕ್ಷಿತಾಃ ಎಂಬ ಮಾತಿನಂತೆ ಧರ್ಮದ ರಕ್ಷಣೆಯನ್ನು ಯಾರು ಮಾಡುತ್ತಾರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ.ಧರ್ಮದ ಆಚರಣೆ ಇಲ್ಲದೆ ಇದ್ದರೆ ಜನ್ಮ ಕೊಟ್ಟಂತಹ ತಂದೆ ತಾಯಿಯ ಆಶೀರ್ವಾದ ನಮಗೆ ದೊರಕುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಧರ್ಮದ ರಕ್ಷಣೆಗೆ ಮುಂದಾಗಬೇಕಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು.
ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದಲ್ಲಿ ಈಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವ ಮತ್ತು ಶ್ರೀಮಠದ ಹಿಂದಿನ ಅಲ್ಲಮಪ್ರಭು ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ೧೨ನೇ ಶತಮಾನದಲ್ಲಿ ಸಮ ಸಮಾಜ ಕನಸು ಕಂಡವರು. ವರ್ಗ ರಹಿತ, ವರ್ಣ ರಹಿತ ಎಲ್ಲ ಜಾತಿಗಳನ್ನು ಮೀರಿ ಬೆಳೆದವರು ಬೆಳೆದವರು. ಅಂತ ಬಸವಣ್ಣನವರ ಹೆಸರಿನಲ್ಲಿ ಸಿಕ್ಕಿರುವ ಬಸವಶ್ರೀ ಪ್ರಶಸ್ತಿಯು ನನಗೆ ಇನಷ್ಟು ಸಮಾಜಮುಖಿ ಕೆಲಸ ಮಾಡುವ ಜವಾಬ್ದಾರಿ ನೀಡಿದೆ. ಬಸವಣ್ಣ ಹೇಳಿದ ಹಾಗೆ ನಾವೆಲ್ಲರೂ ಸಮಾಜದ ಎಲ್ಲರಿಗೂ ಲೇಸುನಿಸುವಂತೆ ಬದುಕಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಮಹಾಂತೇಶ ಕವಟಗಿಮಠ ಅವರನ್ನು ಶ್ರೀಮಠದಿಂದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸತ್ಕರಿಸಿ ಗೌರವಿಸಲಾಯಿತು
ಶ್ರೀಮಠದ ಶಿವಪ್ರಸಾದ ದೇವರು, ತೆಲಂಗಾಣದ ವೀರುಪಾಕ್ಷಿ ದೇವರು,ಹಿಮಾಲಯ ತಪಸ್ವಿ ನಿರಂಜನಾನಂದ ಸ್ವಾಮೀಜಿ,ಕಲ್ಬುರ್ಗಿ ರುದ್ರಮುನಿ ದೇವರು ಇತರರಿದ್ದರು.