ಜಯಂತಿಗಳು ಆಚರಣೆಗೆ ಸಿಮಿತವಾಗದಿರಲಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ನೀಹ ಅಭಿಪ್ರಾಯ
ಬೆಳಗಾವಿ ನಗರದಲ್ಲಿ ನಡೆದ ವಾಲ್ಮೀಕ ಜಯಂತಿ ಕಾರ್ಯಕ್ರಮ.
ಬೆಳಗಾವಿ ನಗರದಲ್ಲಿ ನಡೆದ ವಾಲ್ಮೀಕ ಜಯಂತಿ ಕಾರ್ಯಕ್ರಮ.
Published on: 

ಜಯಂತಿಯು ಕೇವಲ ಆಚರಣೆಗೆ ಸೀಮಿತವಾಗಬಾರದು
| ಕನ್ನಡ ಅಭಿವೃದ್ಧಿ ಪ್ರಾಽಕಾರದ ಸದಸ್ಯ ರವಿಕುಮಾರ ನೀಹ ಅಭಿಮತ | ವಾಲ್ಮೀಕಿ ಜಯಂತಿ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮಹರ್ಷಿ ವಾಲ್ಮೀಕಿ ಜಯಂತಿಯು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಜೀವನ ಮತ್ತು ಆದರ್ಶಗಳಿಂದ ನಾವು ಕಲಿಯಬೇಕಾದ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಯುವಜನರು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು ಹಾಗೂ ಕಲಿಕೆಯ ಪ್ರಕ್ರಿಯೆಯನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಽಕಾರದ ಸದಸ್ಯ ರವಿಕುಮಾರ ನೀಹ ಕರೆ ನೀಡಿದರು.
ಇಲ್ಲಿನ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ  ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ತಾರತಮ್ಯವಿಲ್ಲದ ಸಮಾನತೆಯ ರಾಜ್ಯದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದವರು ಮಹರ್ಷಿ ವಾಲ್ಮೀಕಿ. ಹೀಗಾಗಿ ರಾಮರಾಜ್ಯದ ನಿಜವಾದ ನಿರ್ಮಾತೃ ಮಹರ್ಷಿ ವಾಲ್ಮೀಕಿ ಎಂದರು.
ವಾಲ್ಮೀಕಿ ಎಂಬುದು ಮನಸ್ಸನ್ನು ನಿಗ್ರಹಿಸುವ, ಒಂದೇ ಗುರಿಯತ್ತ ಗಮನ ಕೇಂದ್ರೀಕರಿಸುವ ಮತ್ತು ನಿಶ್ಚಲವಾದ ಸಂಕಲ್ಪಶಕ್ತಿಯನ್ನು ಬೆಳೆಸಿಕೊಳ್ಳುವ ಪ್ರೇರಣೆಯ ಸಂಕೇತವಾಗಿದೆ. ಶ್ರೀರಾಮನ ವ್ಯಕ್ತಿತ್ವ ಹಾಗೂ ಆತನ ಜೀವನದ ಮೌಲ್ಯ ತಿಳಿಯಲು ವಾಲ್ಮೀಕಿ ರಾಮಾಯಣ ಮಹತ್ವದ ಆಕರವಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನ್ನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಽಕಾರಿ ಬಸವರಾಜ ಕುರಿಹುಲಿ, ಪಾಲಿಕೆಯ ಉಪ ಆಯುಕ್ತ ಉದಯಕುಮಾರ ತಳವಾರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕವಿತಾ ಕುಸಗಲ್ಲ ,ಮುಖಂಡರಾದ ರಾಜಶೇಖರ ತಳವಾರ, ಭಾವುಕಣ್ಣ ಭಂಗ್ಯಗೋಳ, ಯಲ್ಲಪ್ಪ ಕೋಳೇಕರ, ಮಲ್ಲೇಶ ಚೌಗಲಾ, ಮಹದೇವ ತಳವಾರ ಇತರರಿದ್ದರು.

ಪೋಟೊ:೨೬ಆನಂದ೩
ಬೆಳಗಾವಿ ನಗರದಲ್ಲಿ  ಕುಮಾರ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ರವಿಕುಮಾರ ನೀಹ ಉದ್ಘಾಟಿಸಿದರು. ರಾಮನಗೌಡ ಕನ್ನೊಳ್ಳಿ,ರವಿ ಬಂಗಾರಪ್ಪನ್ನವರ, ರಾಜಶೇಖರ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net