ಬಸ್ ಶೆಲ್ಟರ್ ಬಳಿ ಕಸದ ರಾಶಿ
| ಚಿಕ್ಕೋಡಿ ಪಟ್ಟಣದಲ್ಲಿ ಸ್ವಚ್ಛತೆ | ಸಾರ್ವಜನಿಕರ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ನಗರದ ಚಿಕ್ಕೋಡಿ-ವಿಜಯಪುರ ರಸ್ತೆಯಲ್ಲಿನ ಅಂಕಲಿಕೂಟ ಇರುವ ಬಸ್ ಶೆಲ್ಟರ್ ಬಳಿ ಬಿದ್ದಿರುವ ಕಸದ ರಾಶಿಯಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಲು ಹಿಂಜರಿಯುವಂತಾಗಿದೆ.
ಪಟ್ಟಣದ ಕಾಲೇಜು, ಯಕ್ಸಂಬಾ, ವಿಜಯಪುರ ಮಾರ್ಗದ ಬಸ್ ಪ್ರಯಾಣಿಕರಿಗೆ ಇಲ್ಲಿನ ಬಸ್ ತಂಗುದಾಣ ಆಸರೆಯಾಗಿದೆ. ಆದರೆ ಪುರಸಭೆ ಅಧಿಕಾರಿಗಳು ನಿರ್ಲಕ್ಷದಿಂದ ಸುತ್ತಲಿನ ಜನರು ಎಸೆಯುವ ಕಸದ ರಾಶಿಯ ಗಲೀಜು, ಪುರಸಭೆ ಸಿಬ್ಬಂದಿ ತೆರವು ಮಾಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಚ್ಛ ಭಾರತಕ್ಕೆ ಕಪ್ಪು ಚುಕ್ಕೆ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಚಚ್ಚ ಭಾರತ ಯೋಜನೆಗೆ ಕಪ್ಪು ಚುಕ್ಕೆ ಎಂಬಅತೆ ಪಟ್ಟಣದ ಮುಖ್ಯ ರಸ್ತೆಯ ಪ್ರವಾಸಿ ಮಂದಿರ, ನ್ಯಾಯಾಲಯ , ಬಸವ ವೃತ್ತ, ಸೇರಿ ಆಗುವ ಸ್ಥಳಗಳಲ್ಲಿ ಎಲ್ಲಿಂದಲೋ ಕಸದ ರಾಶಿ ರಾರಾಜಿಸುತ್ತಿತ್ತು, ಸ್ವಚ್ಛತೆಗೆ ಅಧಿಕಾರಿ ವರ್ಗ ಆದ್ಯತೆ ನೀಡದೆ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರಿಗೆ ರೋಗ ರುಜ್ಜಿನ ಭೀತಿ ಕಾಡುತ್ತಿದೆ.
ಕಾಟಾಚಾರಕ್ಕೆ ಜಾಗೃತಿ:
ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರಸಭೆ ವತಿಯಿಂದ ರಂಗೋಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು ಮೂಡಿಸಿದೆ. ಆದರೆ ಅಧಿಕಾರಿಗಳ ಕಾರ್ಯ ಜಾಗೃತಿ ಕಾರ್ಯಕ್ರಮಕ್ಕೆ ಸೀಮಿತವಾಗಿರಬೇಕು, ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು.ಹಾಗೂ ಎಲ್ಲಿಂದಲೋ ಕಸ ಹಾಕುವ ಮತ್ತು ಸರಿಯಾಗಿ ಕಸ ವಿಲೇವಾರಿ ಮಾಡಿದ ಸಿಬ್ಬಂದಿ ಮೇಲೆ ಕ್ರಮಕ್ಕೆ ಮುಂದಾಗುವುದು ಸಾರ್ವಜನಿಕರ ಆಗ್ರಹವಾಗಿದೆ.