ಚಿಕ್ಕೋಡಿ ಜನರಿಗೆ ತಪ್ಪದ ಸಂಚಾರ ಸಿಕ್ಕು

ಕಾಮಗಾರಿ ಆಮೆಗತಿಯಿಂದ ತಪ್ಪದ ಗೋಳು
ಚಿಕ್ಕೋಡಿ ಪಟ್ಟಣದ ದುರ್ಗಾಭವನದ ಬಳಿ ರಸ್ತೆಯಲ್ಲಿ ವಾಹನ ಓಡಾಟದ ವೇಳೆ ಎದ್ದಿರುವ ಧೂಳು. 
ಚಿಕ್ಕೋಡಿ ಪಟ್ಟಣದ ದುರ್ಗಾಭವನದ ಬಳಿ ರಸ್ತೆಯಲ್ಲಿ ವಾಹನ ಓಡಾಟದ ವೇಳೆ ಎದ್ದಿರುವ ಧೂಳು. 
Published on: 

ಆಮೆಗತಿಯಲ್ಲಿ ಸಾಗುತ್ತಿದೆ ರಸ್ತೆ ಅಗಲೀಕರಣ
ಜನರಿಗೆ ತಪ್ಪದ ಸಂಚಾರ ಸಿಕ್ಕು | ಸವಾರರಿಗೆ ಧೂಳಿನ ಮಜ್ಜನ  
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಪಟ್ಟಣದಲ್ಲಿ ಹಾದು ಹೋಗಿರುವ ಗೋಟೂರ-ವಿಜಯಪುರ ರಸ್ತೆ ಕಾಮಗಾರಿ ವಿಳಂಬದಿAದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಇಲ್ಲಿನ ಸಂಚಾರ ಸಿಕ್ಕಿನಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಜತೆಗೆ ತಗ್ಗು-ಗುಂಡಿಗಳಿAದ ಜನರಿಗೆ ಧೂಳಿನ ಮಜ್ಜನ ಮಾಡಿಸಿದಂತಾಗುತ್ತದೆ.
ವಾಹನ ಸವಾರರಿಗೆ ಅನುಕೂಲವಾಗಲೆಂದು ಅಂಕಲಿ ಖೂಟದಿಂದ ದುರ್ಗಾಭವನದವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಕಳೆದ ಆರು ತಿಂಗಳ ಹಿಂದೆ ಸ್ಥಳೀಯ ಶಾಸಕರು ಚಾಲನೆ ನೀಡಿದ್ದರು. ಆದರೆ, ಆರು ತಿಂಗಳಿAದ ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆ, ಚರಂಡಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಪರಿಣಾಮ ಇಲ್ಲಿನ ಇಕ್ಕಟ್ಟಾದ ರಸ್ತೆಯಲ್ಲಿ ಜನರು ನಿತ್ಯ ಓಡಾಡುವಂತಾಗಿದೆ.
ತಗ್ಗು-ಗುAಡಿಗಳದ್ದೆ ಕಾರುಬಾರು: ಇಲ್ಲಿನ ಬಸವ ವೃತ್ತದಿಂದ ಅಂಕಲಿ ಖೂಟದವರೆಗಿನ ರಸ್ತೆಯಲ್ಲಿ ತಗ್ಗು-ಗುಂಡಿಗಳಿಗೆ ಲೆಕ್ಕವೆ ಇಲ್ಲದಂತಾಗಿದೆ. ಇಂತಹ ರಸ್ತೆಯಲ್ಲಿ ಸಾರಿಗೆ ಬಸ್, ಟ್ರಾÈಕ್ಟರ್ ಭಾರಿ ವಾಹನಗಳ ಓಡಾಟ ದೊಡ್ಡ ಸವಾಲಾಗಿದೆ. ಸಂಚಾರ ದಟ್ಟನೆ ನಿಯಂತ್ರಿಸಲು ಸಂಚಾರಿ ಪೊಲೀಸರು ನಿತ್ಯ ಹರಸಾಹಸ ಪಡುವಂತಾಗಿದೆ. ಪುರಸಭೆ ಮತ್ತು ನಗರಾಭಿವೃದ್ಧಿ ಇಲಾಖೆಯು ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ವೇಗ ನೀಡಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ಇಲ್ಲಿನ ಜನರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಂಕಷ್ಟ: ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿರುವ ಮತ್ತು ಪಟ್ಟಣದಲ್ಲಿರುವ ಶಾಲಾ ಕಾಲೇಜುಗಳಿಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ಅಂಕಲಿ ಖೂಟದಿಂದ ದುರ್ಗಾಭವನದವರೆಗಿನ ರಸ್ತೆ ಮಾರ್ಗವಾಗಿಯೆ ಬರಬೇಕಿದೆ. ಇಲ್ಲಿನ ವಾಹನ ಸಿಕ್ಕು, ಧೂಳು, ತಗ್ಗು-ಗುಂಡಿಗಳಿAದ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.
:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net