

ಗಡಿಭಾಗದ ನದಿಗಳಿಗೆ ಮಹಾ ನೀರು
ಬತ್ತಿದ ನದಿಗಳಿಗೆ ಜೀವ ಕಳೆ | ಸಂಕಷ್ಟದಲ್ಲಿಯೂ ಆಶಾವಾದ
ಆನಂದ ಭಮ್ಮನ್ನವರ ಚಿಕ್ಕೋಡಿ
ಮುಂಗಾರು ಜತೆಗೆ ಹಿಂಗಾರು ಮಳೆಯೂ ಕೈ ಕೊಟ್ಟಿರುವ ಪರಿಣಾಮ ಬೆಳಗಾವಿ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟ ಕುಸಿದಿದೆ. ಈ ಮಧ್ಯೆಯೇ ಬತ್ತಿದ ನದಿಗಳಿಗೆ ಮಹಾರಾಷ್ಟçದ ಜಲಾಶಯದಿಂದ ನೀರು ಹರಿದು ಬರುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಮಹಾರಾಷ್ಟçದ ಕೊಯ್ನಾ ಮತ್ತು ಕಾಳಮ್ಮವಾಡ ಜಲಾಶಯದಿಂದ ಹರಿದು ಬರುವ ನೀರು ರಾಜ್ಯದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ. ಆದರೆ, ಬೇಸಿಗೆಯಲ್ಲಿ ಇದು ಸಹಕಾರಿಯಾಗುತ್ತಿದೆ. ಕೊಲ್ಲಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ಕಾಳಮ್ಮವಾಡಿ ಜಲಾಶಯದಿಂದ ಮಹಾರಾಷ್ಟç ವ್ಯಾಪ್ತಿಯ ೨೦ಕ್ಕೂ ಅಧಿಕ ಗ್ರಾಮಗಳಿಗೆ ಕಳೆದ ವಾರದಿಂದ ನಿತ್ಯ ೬೦೦ ಕ್ಯೂಸೆಕ್ ನೀರು ದೂಧಗಂಗಾ ನದಿಗೆ ಬಿಡಲಾಗಿದೆ. ಇದರ ಲಾಭ ರಾಜ್ಯದ ಸದಲಗಾ, ಮಲಿಕವಾಡ, ಬಾರವಾಡ, ಕಾರದಗಾ ಗ್ರಾಮಗಳಿಗೂ ಲಭಿಸಿದೆ.
ನೀರಿನ ಯೋಜನೆಗೆ ಅನುಕೂಲ:
ದೂಧಗಂಗಾ ನದಿಗೆ ಮಹಾರಾಷ್ಟç ಸರ್ಕಾರ ಹರಿ ಬಿಟ್ಟಿರುವ ನೀರು ಸುಳಕೂಡ ಬ್ಯಾರೇಜ್ ಮೂಲಕ ಕೃಷ್ಣಾ ನದಿಯ ಕಲ್ಲೋಳ ಬ್ಯಾರೇಜ್ವರಗೆ ಹರಿದು ಬರುವುದರಿಂದ ರಾಜ್ಯದ ೧೦ಕ್ಕೂ ಅಧಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜೀವ ಕಳೆ ಬಂದಿದೆ. ನದಿ ನೀರನ್ನು ಅವಲಂಬಿಸಿದ್ದ ೫ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬೆಳೆಗಳು ಜೀವ ತುಂಬಿಕೊAಡಿವೆ.
ಹಿರಣ್ಯಕೇಶಿಗೂ ಮಹಾ ಜಲ:
ಮಹಾರಾಷ್ಟçದ ಚಿತ್ರಿ ಜಲಾಶಯದಿಂದ ಹಿರಣ್ಯಕೇಶಿ ನದಿಗೆ ಕಳೆದ ವಾರ ನೀರು ಹರಿ ಬಿಡಲಾಗಿದೆ. ಇದು ಗಡಿಯಲ್ಲಿರುವ ನಾಗನೂರು ಸೇತುವೆ ಮೂಲಕ ಸಂಕೇಶ್ವರ, ಗೋಟೂರ, ಹೆಬ್ಬಾಳ ಚಿಕ್ಕಾಲಗುಡ್ಡ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಅನುಕೂಲವಾಗಿದೆ. ಸಂಪೂರ್ಣ ಬತ್ತಿದ ನದಿಗೆ ಜೀವ ಕಳೆ ಬಂದಿದೆ.
----------
ಬಾಕ್ಸ್
ಕೃಷ್ಣಾಗೆ ನೀರು ಹರಿಸಲು ಒತ್ತಾಯ
ಕೃಷ್ಣಾ ನದಿ ಪಾತ್ರದ ರೈತರಿಗೆ ವಿದ್ಯುತ್ ಕಡಿತದಿಂದ ಬೆಳೆಗಳು ಒಣಗುತ್ತಿವೆ. ಜತೆಗೆ ನದಿ ನೀರು ದಿನೇ ದಿನೆ ಖಾಲಿಯಾಗುತ್ತಿದೆ. ರಾಜ್ಯ ಸರ್ಕಾರ ಮಹಾರಾಷ್ಟç ಸರ್ಕಾರದ ಮೇಲೆ ಒತ್ತಡ ಹೇರಿ ಕೃಷ್ಣಾ ನದಿಗೆ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನೀರು ಹರಿಸಲು ಕ್ರಮ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
-----------
ಕೋಟ್-
ಮಹಾರಾಷ್ಟçದ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಗಡಿಭಾಗದ ನದಿಗಳಿಗೆ ಮಹಾರಾಷ್ಟçದ ಜಲಾಶಯದಿಂದ ನಮ್ಮ ಪಾಲಿನ ನೀರು ಹರಿಸಲು ಸರ್ಕಾರ ಕ್ರಮ ವಹಿಸಬೇಕು. ಇದರಿಂದ ರೈತರಿಗೆ ಬೆಳೆ ಉಳಿಸಿಕೊಳ್ಳಲು, ಜನ-ಜಾನುವಾರುಗಳಿಗೆ ಅನುಕೂಲವಾಗುತ್ತದೆ.
| ರಾಜು ಖಿಚಡೆ
ರೈತ ಮುಖಂಡ, ಕಾರದಗಾ