ಕಾರ್ಖಾನೆಗಳ ಲಾಭದಲ್ಲಿ ರೈತರಿಗೂ ಪಾಲು!

-ದೇಶದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ
sugarcane factory profity diveded to formers
sugarcane price box
Published on: 

ಬೆಳಗಾವಿ:ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ಮಹತ್ವದ ಸ್ಪಂದನೆ ದೊರೆತಿದ್ದು, ಕಬ್ಬು ಬೆಳೆಗಾರರ ಹಿತಾಸಕ್ತಿಗೆ ಆದ್ಯತೆ ನೀಡಿರುವ ಬೆಳಗಾವಿ ಜಿಲ್ಲಾಡಳಿತ, ಸಕ್ಕರೆ ಮಾರಾಟದಿಂದ ದೊರೆಯುವ ಲಾಭದಲ್ಲಿ ರೈತರಿಗೂ ಪಾಲು ನೀಡುವ ವಿನೂತನ ’ಲಾಭ ಹಂಚಿಕೆ’ (ಪ್ರಾಫಿಟ್ ಶೇರಿಂಗ್) ಸೂತ್ರವನ್ನು ರೂಪಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ತರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರಭಾರಿ ಜಿಲ್ಲಾಧಿಕಾರಿ ರಾಹುಲ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಖಾನೆಗಳ ಮಾಲೀಕರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸಿ ರೂಪಿಸಿರುವ ಈ ಸೂತ್ರಕ್ಕೆ ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಸಹಮತ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸಕ್ಕರೆ ಕಾರ್ಖಾನೆಗಳ ಒಟ್ಟಾರೆ ಆದಾಯದ ಆಧಾರದ ಮೇಲೆ ಲಾಭ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಹೊಸ ಸೂತ್ರದಡಿ ಸಕ್ಕರೆ ಮಾರಾಟದ ಸರಾಸರಿ ಲಾಭವನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ಹಣ ಪಾವತಿಸಲು ನಿರ್ಧರಿಸಲಾಗಿದೆ. ಇದರಿಂದ ಸಕ್ಕರೆ ಬೆಲೆ ಹೆಚ್ಚಾದಾಗ ಅದರ ಲಾಭ ಕಬ್ಬು ಬೆಳೆಗಾರರಿಗೂ ತಲುಪುವ ನಿರೀಕ್ಷೆಯಿದೆ.

ಕಬ್ಬಿನ ಬೆಲೆ ಹೆಚ್ಚಳ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ರೈತರು ಹಲವು ದಿನಗಳಿಂದ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದರು. ರೈತರ ಒತ್ತಡ ಹಾಗೂ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಕಬ್ಬು ಬೆಳೆಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಈ ಸೂತ್ರವನ್ನು ರೂಪಿಸಿದೆ.

ಆದರೆ, ರೈತ ಹೋರಾಟಗಾರರು ಮೊದಲ್ ಕಂತಿನಲ್ಲಿ ಟನ್ ಕಬ್ಬಿಗ್ೆ3,600 ರೂ.್ನೀಡಬೇಕು. ಬಳಿಕ ಎಂಎಸ್ ಪಿ ದರದ ಆಧಾರದ ಮೇಲೆ ಸಿಗುವ ಹೆಚ್ಷುವರಿ ಹಣವನ್ನು ಎರಡನೇ ಕಂತಿನಲ್ಲಿ ನೀಡುವ ಕುರಿತು ಸರ್ಕಾರ, ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಒಡಂಬಡಿಕೆ ಪತ್ರ ಮಾಡಿಕೊಡಬೇಕು ಎಂದು ವಾದಿಸಿದ್ದಾರೆ.

ಎರಡು ಹಂತಗಳಲ್ಲಿ ಕಬ್ಬಿನ ಹಣ ಪಾವತಿ

ಹೊಸ ನಿರ್ಧಾರದಂತೆ ಕಬ್ಬು ಬೆಳೆಗಾರರಿಗೆ ಮೂರು ಹಂತಗಳಲ್ಲಿ ಹಣ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ.

*ಮೊದಲ ಮುಂಗಡ: ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ -3, 600 ರೂ.

*ಎರಡನೇ ಕಂತು, ಅಂತಿಮ ಕಬ್ಬಿನ ಬಿಲ್: ಹೊಸ ಹಂಗಾಮು ಆರಂಭವಾಗುವ ಮೊದಲು ಸಕ್ಕರೆಯ ಸರಾಸರಿ ಮಾರಾಟ ದರ ಪ್ರತಿ ಕೆ.ಜಿ.ಗೆ 45 ರೂ.ಕ್ಕಿಂತ ಹೆಚ್ಚಾದಲ್ಲಿ, ಲಾಭ ಹಂಚಿಕೆ ಸೂತ್ರದನ್ವಯ ಅಂತಿಮ ಕಬ್ಬಿನ ಬಿಲ್ ಪಾವತಿಸಬೇಕು.

..............

ಬಾಕ್ಸ್

ರೈತರ ಹೋರಾಟಕ್ಕೆ ಸಿಕ್ಕ ಫಲವೇ?

ಕಬ್ಬು ಬೆಳೆಯಲು ರೈತರು ಮಾಡುತ್ತಿರುವ ಅಪಾರ ಶ್ರಮ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಕೃಷಿ ನಿರ್ವಹಣೆಯ ಸವಾಲುಗಳನ್ನು ಗಮನಿಸಿದಾಗ ಸಕ್ಕರೆ ಮಾರಾಟದ ಲಾಭದಲ್ಲಿ ರೈತರಿಗೂ ಪಾಲು ನೀಡುವ ನಿರ್ಧಾರ ಮಹತ್ವ ಪಡೆದಿದೆ. ಸಕ್ಕರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಾಗ ಅದರ ಲಾಭ ಕೇವಲ ಕಾರ್ಖಾನೆಗಳಿಗೆ ಸೀಮಿತವಾಗದೆ ಕಬ್ಬು ಬೆಳೆಗಾರರಿಗೂ ತಲುಪಬೇಕು ಎಂಬ ರೈತರ ಆಶಯಕ್ಕೆ ಈ ಸೂತ್ರ ಬಲ ನೀಡಿದೆ.