ಕನ್ನಡ ಪ್ರೋತ್ಸಾಹಕ್ಕೆ ಅನುದಾನ ಕೊರತೆ

ಹೊರನಾಡ ಕನ್ನಡ ವಿದ್ಯಾರ್ಥಿಗಳ ಸಿಗದ ಶಿಷ್ಯವೇತನ
ಕನ್ನಡ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಕಚೇರಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬರೆದಿರುವ ಪತ್ರ.
ಕನ್ನಡ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಕಚೇರಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬರೆದಿರುವ ಪತ್ರ.
Published on: 

ಕನ್ನಡ ಪ್ರೋತ್ಸಾಹಕ್ಕೆ ಅನುದಾನ ಕೊರತೆ!
| ಮೂರು ವರ್ಷದಿಂದ ಯೋಜನೆ ಸ್ಥಗಿತ
| ಹೊರನಾಡು ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ಸಿಗದ ಶಿಷ್ಯವೇತನ

ಆನಂದ ಭಮ್ಮನ್ನವರ ಚಿಕ್ಕೋಡಿ
ಹೊರನಾಡಿನ ಕನ್ನಡ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕನ್ನಡ ಅಭಿವೃದ್ಧಿ ಪ್ರಾಽಕಾರ ಆರಂಭಿಸಿದ `ಕನ್ನಡ ಮಾಧ್ಯಮ ಪ್ರಶಸ್ತಿ' ಶಿಷ್ಯವೇತನ ಯೋಜನೆ ಅನುದಾನ ಕೊರತೆಯಿಂದ ಕಳೆದ ಮೂರು ವರ್ಷದಿಂದ ಸ್ಥಗಿತಗೊಂಡಿದೆ.
ಪರಭಾಷಾ ವ್ಯಾಮೋಹ ಹಾಗೂ ಕನ್ನಡ ಬಗ್ಗೆ ಹೆಚ್ಚುತ್ತಿರುವ ನಿರಾಸಕ್ತಿಯಿಂದ ಗಡಿಭಾಗದಲ್ಲಿ ಕನ್ನಡಿಗರನ್ನು ಹುಡುಕುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೆರೆಯ ರಾಜ್ಯದ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಬಿಟ್ಟು ಅಭಿಮಾನದಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಲಿಯುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಪ್ರೋತ್ಸಾಹಿಸುತ್ತಿಲ್ಲ. ಇರುವ ಯೋಜನೆಯನ್ನೂ ಅನುದಾನ ಕೊರತೆ ನೆಪವೊಡ್ಡಿ ಬಂದ್ ಮಾಡಿರುವುದು ತೀವ್ರ ನಿರಾಸೆಗೆ ಕಾರಣವಾಗಿದೆ.
ವೇತನಕ್ಕಾಗಿ ಬಳಕೆ?:
ಕನ್ನಡ ಅಭಿವೃದ್ಧಿ ಪ್ರಾಽಕಾರಕ್ಕೆ ಸರ್ಕಾರ ಪ್ರತಿ ವರ್ಷ ನೀಡುವ ೨ ಕೋಟಿ ರೂ. ಅನುದಾನದಲ್ಲೇ ಕನ್ನಡ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ನೀಡಲಾಗುತ್ತಿತ್ತು. ಮೂರು ವರ್ಷದಿಂದ ಹಣದ ಕೊರತೆ ನೆಪ ಹೇಳಿ ಸ್ಥಗಿತ ಮಾಡುತ್ತಿರುವುದು ಎಷ್ಟು ಸರಿ. ಪ್ರಸ್ತುತ ಆಡಳಿತ ಮಂಡಳಿ ತಮ್ಮ ವೇತನ ಮತ್ತ ಭತ್ಯೆಗಳ ಹೆಚ್ಚಳಕ್ಕಾಗಿ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಯೋಜನೆ?:
ಹೊರನಾಡು ಕನ್ನಡ ಶಾಲೆಗಳಲ್ಲಿ ೧೦ ಮತ್ತು ೧೨ನೇ ತರಗತಿಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕನ್ನಡ ಅಭಿವೃದ್ಧಿ ಪ್ರಾಽಕಾರ ೨೦೧೨ರಲ್ಲಿ ಕನ್ನಡ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ನೀಡಲು ಪ್ರಾರಂಭಿಸಿತು. ಪ್ರತಿ ಶಾಲೆಗೆ ಪ್ರತಿ ವರ್ಷ ಮೊದಲ ಮೂರು ಕ್ರಮಾಂಕದ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ೧೨ ಸಾವಿರ ರೂ., ೧೦ ಸಾವಿರ ರೂ., ೮ ಸಾವಿರ ರೂ. ಹಾಗೂ ಶೈಕ್ಷಣಿಕ ಕಿಟ್ ನೀಡಲಾಗುತ್ತಿತ್ತು. ಆದರೆ, ೨೦೨೩-೨೪ನೇ ಸಾಲಿನಿಂದ ಸ್ಥಗಿತವಾಗಿದೆ. ಇದರಿಂದ ಮಹಾರಾಷ್ಟç, ಗೋವಾ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳನಾಡಿನಲ್ಲಿನ ಕನ್ನಡ ಶಾಲೆಯಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ.
------
ಬಾಕ್ಸ್
ಸಿಎA ಕಚೇರಿ ಪತ್ರಕ್ಕೂ ಡೋಂಟ್ ಕೇರ್
ಹೊರನಾಡು ಕನ್ನಡ ವಿದ್ಯಾರ್ಥಿಗಳ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ಅನುದಾನ ತುರ್ತಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಕಳೆದ ಮೇ ತಿಂಗಳಲ್ಲಿ ಪತ್ರ ಬರೆದು ಕ್ರಮಕ್ಕೆ ಸೂಚಿಸಿದರೂ, ಇನ್ನುವರೆಗೂ ಅನುದಾನ ಬಿಡುಗಡೆಯಾಗಿಲ್ಲ.
-----
ಕೋಟ್
ಪ್ರತಿಕೂಲ ವಾತಾವರಣದಲ್ಲೂ ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಿರುವ ಕನ್ನಡ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ಅನುದಾನ ತುರ್ತಾಗಿ ಬಿಡುಗಡೆ ಮಾಡಬೇಕು.
| ಮಲಿಕಜಾನ್ ಶೇಖ್, ಅಧ್ಯಕ್ಷ, ಆದರ್ಶ ಕನ್ನಡ ಬಳಗ, ಮಹಾರಾಷ್ಟç
-------
ಕೋಟ್-
ಸರ್ಕಾರ ಪ್ರತಿ ವರ್ಷ ಪ್ರಾಽಕಾರಕ್ಕೆ ನೀಡುವ ೨ ಕೋಟಿ ರೂ. ಅನುದಾನ ಸಾಕಾಗುತ್ತಿಲ್ಲ. ಶಿಷ್ಯವೇತನಕ್ಕೇ ೧.೫೦ ಕೋಟಿ ರೂ. ಖರ್ಚಾಗುತ್ತದೆ. ಪ್ರತಿ ವರ್ಷ ಶೇ.೧೦ರಷ್ಟು ಅನುದಾನ ಹೆಚ್ಚಿಸಿದರೆ ಕನ್ನಡ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ಯೋಜನೆ ಮುಂದುರಿಸಲು ಅನುಕೂಲವಾಗುತ್ತದೆ.
| ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಽಕಾರ
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net