

ಓಟದ ಸ್ಪರ್ಧೆ ಪಂಟರ್ ಹೆಲಿಕಾಪ್ಟರ್ ಬೈಜಾ!
| ಜತೆಗೂಡಿದ ಸಮಬಲದ ಬ್ರೇಕ್ ಫೇಲ್ ಬೈಜಾ | ೨ ಎತ್ತುಗಳ ಮೌಲ್ಯ ೧.೬೦ ಕೋಟಿಗೂ ಹೆಚ್ಚು!
| ಆನಂದ ಭಮ್ಮನ್ನವರ ಚಿಕ್ಕೋಡಿ
ಎತ್ತಿನ ಬಂಡಿ ಓಟ ಜಾನಪದ ಹಿನ್ನೆಲೆಯ ಹಾಗೂ ರೈತರಲ್ಲಿ ಜನಪ್ರಿಯವಾದ ಸ್ಪರ್ಧೆ. ಅದರಲ್ಲೂ ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಪ್ರತಿ ಜಾತ್ರೆ, ಉತ್ಸವ, ಗಣ್ಯರ ಜನ್ಮದಿನ ಹೀಗೆ ವಿವಿಧ ಸಂದರ್ಭಗಳಲ್ಲಿ ಎತ್ತಿನ ಬಂಡಿ ಸ್ಪರ್ಧೆ ಆಯೋಜಿಸುವುದು ಸಾಮಾನ್ಯ. ಈ ಸ್ಪರ್ಧೆಗಳಲ್ಲಿ `ಹೆಲಿಕಾಪ್ಟರ್ ಬೈಜಾ' ಅಖಾಡಕ್ಕೆ ಇಳಿದಿದೆ ಎಂದರೆ ಮೊದಲ ಸ್ಥಾನ ಅದಕ್ಕೇ ಕಟ್ಟಿಟ್ಟ ಬುತ್ತಿ ಎಂಬ ಮಾತು ಈ ಭಾಗದಲ್ಲಿ ಜನಜನಿತ. ಹೆಲಿಕಾಪ್ಟರ್ ಬೈಜಾ ಎತ್ತಿಗೆ ಸರಿಸಾಟಿಯಾಗಬಲ್ಲ ಎತ್ತು ಇನ್ನೊಂದಿಲ್ಲ ಎಂಬುದು ಗಡಿಭಾಗದ ಜನರ ನಂಬಿಕೆ.
ಹೆಲಿಕಾಪ್ಟರ್ ಬೈಜಾ ಅಖಾಡಕ್ಕಿಳಿದರೆ ಹೆಲಿಕಾಪ್ಟರ್ ಭೂಸ್ಪರ್ಶ ಮಾಡುವಾಗ ಏಳುವ ದೂಳಿನಂತೆ ಮೈದಾನದಲ್ಲಿ ದೂಳು ಏಳುತ್ತದೆ. ಇದೇ ಕಾರಣಕ್ಕಾಗಿ ಈ ಎತ್ತಿಗೆ ಹೆಲಿಕಾಪ್ಟರ್ ಬೈಜಾ ಎಂದು ಕರೆಯಲಾಗುತ್ತದೆ. ಹೆಲಿಕಾಪ್ಟರ್ ಬೈಜಾ ಎತ್ತಿನ ಮಾರುಕಟ್ಟೆ ಮೌಲ್ಯ ೧ ಕೋಟಿ ರೂ. ಆಗಿದ್ದು, ಇದನ್ನು ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಮಾಲೀಕ ಬಾಳು.
೩ ಕೋಟಿಗೂ ಅಽಕ ಬಹುಮಾನ ತಂದು ಕೊಟ್ಟ ಎತ್ತು:
ಬಾಳು ಸಾಕಿರುವ ಖಿಲಾರಿ ತಳಿಯ ೭ ವರ್ಷದ ಎತ್ತು ಹೆಲಿಕಾಪ್ಟರ್ ಬೈಜಾ ಇಲ್ಲಿಯವರೆಗೂ ನಡೆದ ಹತ್ತಾರು ಸರ್ಧೆಗಳಲ್ಲಿ ಫಾರ್ಚೂನರ್ ಕಾರ್, ಟ್ರಾ÷್ಯಕ್ಟರ್, ಬೈಕ್, ಬೆಳ್ಳಿ ಗದೆ ಸೇರಿ ಒಟ್ಟು ೩ ಕೋಟಿ ರೂ.ಗೂ ಅಽಕ ಮೌಲ್ಯದ ಬಹುಮಾನಗಳನ್ನು ಗೆದ್ದಿದೆ. ಹೆಲಿಕಾಪ್ಟರ್ ಬೈಜಾ ಕಂಡರೆ ಸಾಕು ಎತ್ತುಪ್ರೇಮಿಗಳು ಸೆಲಿಗೆ ಮುಗಿಬೀಳುತ್ತಾರೆ.
ಎಲ್ಲರ ಚಿತ್ತ ಬಿಎಂಡಬ್ಲೂ ಮೈದಾನದತ್ತ:
ಗಡಿ ರಾಜ್ಯ ಮಹಾರಾಷ್ಟçದ ಸಾಂಗ್ಲಿ ಜಿಲ್ಲೆ ತಾಸಗಾಂವದಲ್ಲಿ ಮಹಾ ಸಿಎಂ ಏಕನಾಥ ಶಿಂಧೆ ಜನ್ಮದಿನದ ನಿಮಿತ್ತ ಪೈಲ್ವಾನ್ ಚಂದ್ರಕಾAತ ಪಾಟೀಲ ಪ್ರತಿ ವರ್ಷ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸುತ್ತಾರೆ. ಈ ಬಾರಿ ಪ್ರಥಮ ಬಹುಮಾನವಾಗಿ ಬಿಎಂಡಬ್ಲೂ ಕಾರು ಸೇರಿದಂತೆ ಹತ್ತಾರು ಬೆಲೆಬಾಳುವ ವಾಹನಗಳನ್ನು ಬಹುಮಾನವಾಗಿ ಇರಿಸಲಾಗಿದೆ. ಈ ಸರ್ಧೆಯಲ್ಲಿ ಹೆಲಿಕಾಪ್ಟರ್ ಬೈಜಾ ತನಗೆ ಸಮಬಲವಾದ ಬ್ರೇಕ್ ಫೇಲ್ ಬೈಜಾ ಎತ್ತಿಗೆ ಜತೆಯಾಗಿ ಓಡಲಿದ್ದು, ಎಲ್ಲರ ಚಿತ್ತ ಬಿಎಂಡಬ್ಲೂ ಮೈದಾನದತ್ತ ನೆಟ್ಟಿದೆ.
--------
ಕೋಟ್...
ನಮ್ಮ ಜನಪ್ರಿಯತೆ ಹೆಚ್ಚಿಸಿರುವ ಹೆಲಿಕಾಪ್ಟರ್ ಬೈಜಾ ಎತ್ತಿಗೆ ಅದರಷ್ಟೇ ಸಾಮರ್ಥ್ಯ ಹೊಂದಿರುವ ಎತ್ತು ಜೋಡಿ ಮಾಡಬೇಕು ಎನ್ನುವುದು ಬಹಳ ದಿನದ ಕನಸಾಗಿತ್ತು. ಈ ನಿಟ್ಟಿನಲ್ಲಿ ಬರೋಬ್ಬರಿ ೬೧ ಲಕ್ಷ ರೂ. ನೀಡಿ ಬ್ರೇಕ್ ಫೇಲ್ ಬೈಜಾ ಹೆಸರಿನ ಎತ್ತು ಖರೀದಿಸಲಾಗಿದೆ. ಮುಂಬರುವು ಬಿಎಂಡಬ್ಲೂ ಮೈದಾನದಲ್ಲಿಯೂ ಗೆಲುವು ನಮ್ಮದಾಗಲಿದೆ.
| ಬಾಳು ಹಜಾರೆ
ಹೆಲಿಕಾಪ್ಟರ್ ಬೈಜಾ ಎತ್ತಿನ ಮಾಲೀಕ, ಶಿರೂರ