ಆಟೋ ಮಾಲೀಕರು, ಚಾಲಕರ ಪ್ರತಿಭಟನೆ

ಆನ್‌ಲೈನ್ ಆ್ಯಪ್ ಆಧಾರಿತ ಸೇವೆಗೆ ಕಡಿವಾಣ ಹಾಕಲು ಒತ್ತಾಯ
ಬೆಳಗಾವಿಯಲ್ಲಿ ಗುರುವಾರ ಆಟೋ ಮಾಲೀಕರು ಮತ್ತು ಚಾಲಕರು ಪ್ರತಿಭಟನಾ ರ‌್ಯಾಲಿ ನಡೆಸಿದರು. ಮನ್ಸೂರ ಹೊನಗೇಕರ, ಗೌತಮ ಕಾಂಬಳೆ, ಅಬ್ದುಲ್ ಮೇಸ್ತ್ರಿ ಇತರರಿದ್ದರು.
ಬೆಳಗಾವಿಯಲ್ಲಿ ಗುರುವಾರ ಆಟೋ ಮಾಲೀಕರು ಮತ್ತು ಚಾಲಕರು ಪ್ರತಿಭಟನಾ ರ‌್ಯಾಲಿ ನಡೆಸಿದರು. ಮನ್ಸೂರ ಹೊನಗೇಕರ, ಗೌತಮ ಕಾಂಬಳೆ, ಅಬ್ದುಲ್ ಮೇಸ್ತ್ರಿ ಇತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಆನ್‌ಲೈನ ಆ್ಯಪ್ ಆಧಾರಿತ ಹಾಗೂ ಕಾನೂನು ಬಾಹಿರವಾಗಿ ನಡೆದಿರುವ ಪ್ರಯಾಣಿಕರ ಸೇವಾ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಆಟೋ ರಿಕ್ಷಾ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆನ್‌ಲೈನ್ ಆ್ಯಪ್ ಮೂಲಕ ಕಾರ್ಯನಿರ್ವಹಿಸುವ ಖಾಸಗಿ ಬಿಳಿ ಬೋರ್ಡ್ ವಾಹನಗಳು ಹಾಗೂ ಅಗತ್ಯ ಪರ್ಮಿಟ್ ಇಲ್ಲದೇ ವಾಣಿಜ್ಯ ಸಾರಿಗೆ ನಡೆಸುವ ಎಲೆಕ್ಟ್ರಿಕ್ ಆಟೋಗಳ ಬಗ್ಗೆ ತನಿಖೆಯಾಗಬೇಕು. ಅನುಮತಿ ಇಲ್ಲದ ವಾಹನಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈಚೆಗೆ ಆನ್‌ಲೈನ್ ವ್ಯವಸ್ಥೆ ಬಂದಾಗಿನಿಂದ ಆಟೋ ಚಾಲಕರ ಜೀವನೋಪಾಯ ಕಷ್ಟದಲ್ಲಿದ್ದು, ಕಾನೂನು ಉಲ್ಲಂಘಿಸಿ ಪ್ರಯಾಣಿಕರ ಸೇವೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡು, ನಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಮನ್ಸೂರ ಹೊನಗೇಕರ, ಗೌತಮ ಕಾಂಬಳೆ, ಅಬ್ದುಲ್ ಮೇಸ್ತ್ರಿ, ರಫೀಕ್ ದೇವಲಾಪುರ, ಉಮೇಶ ಸಂಕೆಹಳ್ಳಿ, ಅಬ್ದುಲ್ ಶೇಖ್, ಮಲಿಕ್ ಮುಲ್ಲಾ ಇತರರಿದ್ದರು.