ಅಂತರರಾಜ್ಯ ವಾಹನ ಕಳ್ಳನ ಬಂಧನ

ಕುಡಚಿ ಪೊಲೀಸರ ಕಾರ್ಯಾಚರಣೆ
ಅಂತರರಾಜ್ಯ ಕಳ್ಳನಿಂದ ಕಳ್ಳತನ ಮಾಡಲಾದ ವಾಹನ ಜಪ್ತಿ ಮಾಡಿಕೊಂಡ ಪೊಲೀಸರು.
ಅಂತರರಾಜ್ಯ ಕಳ್ಳನಿಂದ ಕಳ್ಳತನ ಮಾಡಲಾದ ವಾಹನ ಜಪ್ತಿ ಮಾಡಿಕೊಂಡ ಪೊಲೀಸರು.
Published on: 

ಅಂತಾರಾಜ್ಯ ವಾಹನ  ಕಳ್ಳನ ಬಂಧನ
ಚಿಕ್ಕೋಡಿ : ಕರ್ನಾಟಕ ಮತ್ತು ಮಹಾರಾಷ್ಟçದ ಗಡಿ ಭಾಗದಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟçದ ಸೋಲ್ಲಾಪುರ ಜಿಲ್ಲೆಯ ಪಾನಿವ ಗ್ರಾಮದ ನಿವಾಸಿ ಸೀತಾರಾಮ ಎಡಗೆ(೩೬) ಎಂಬ ಅಂತಾರಾಜ್ಯ ಕಳ್ಳನನ್ನು ಕುಡಚಿ ಠಾಣೆ ಪೊಲೀಸ್‌ರು ಮಂಗಳವಾರ ಬಂಧಿಸಿದ್ದಾರೆ.
 ಕಳೆದ ಅಕ್ಟೋಬರ್‌ನಲ್ಲಿ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಗೋಡಾವನದಲ್ಲಿ ನಿಲ್ಲಿಸಲಾಗಿದ್ದ ಬುಲೇರೋ ವಾಹನ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸ್‌ರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಬುಲೇರೊ ವಾಹನ ಮತ್ತು ಮಹಾರಾಷ್ಟçದಲ್ಲಿ ಕಳ್ಳತನ ಮಾಡಿದ್ದ ೨ ದ್ವಿಚಕ್ರ ವಾಹನಗಳನ್ನು ವಶ ಪಡೆಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಕುಡಚಿ ಠಾಣೆಯ ಪೊಲೀಸ್‌ರು ತಿಳಿಸಿದ್ದಾರೆ.

ಪೋಟೊ:೧೧ಆನಂದ೫
ಅ