ಯಲ್ಲಮ್ಮದೇವಿ ಜಾತ್ರೆ ಸಂಭ್ರಮ

ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿಗೆ ದೂಳ ದರ್ಶನ ಮೂಲಕ ಭಕ್ತರು ದೇವಿ ದರ್ಶನ ಪಡೆದರು.
ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿಗೆ ದೂಳ ದರ್ಶನ ಮೂಲಕ ಭಕ್ತರು ದೇವಿ ದರ್ಶನ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಮೆರಗು ಹೆಚ್ಚಿಸಿದ ಭಕ್ತರು
  • ಶ್ರದ್ಧಾ ಭಕ್ತಿಯಿಂದ ಹರಕೆ ಸಲ್ಲಿಕೆ
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸುಕ್ಷೇತ್ರ ಕೊಕಟನೂರ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಮೊದಲ ದಿನ ಸೋಮವಾರ ಸಹಸ್ರಾರು ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೂಳದರ್ಶನ ಪಡೆದು ಹರಕೆ ತೀರಿಸಿದರು.
ದೇವಿ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ದರ್ಶನಕ್ಕೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ರಾಜ್ಯದ ವಿವಿಧೆಡೆಯಿಂದ ಬಸ್, ಟ್ರ್ಯಾಕ್ಟರ್ ಹಾಗೂ ಚಕ್ಕಡಿ ಮೂಲಕ ಆಗಮಿಸಿದ ಭಕ್ತರು ಜಾತ್ರೆ ಮೆರುಗು ಹೆಚ್ಚಿಸಿದ್ದಾರೆ.
ದೇವಸ್ಥಾನದ ಸುತ್ತಲಿನ ಪ್ರದೇಶ ಹಾಗೂ ಗ್ರಾಮ ಹೊರವಲಯದಲ್ಲಿ ಟೆಂಟ್ ಹಾಕಿ ವಾಸವಿದ್ದು, ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಜರುಗಿದ ಯಲ್ಲಮ್ಮದೇವಿ ಜಾತ್ರೆಯಲ್ಲಿ ತಾಲೂಕಾಡಳಿದ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆಯಿತು.
"

ಕೊಕಟನೂರ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಪ್ರಮುಖ ಕ್ಷೇತ್ರವಾಗಿದ್ದು, ರೋಗ ನಿವಾರಣೆ, ಸಂಕಷ್ಟ ಪರಿಹಾರ ಕರುಣಿಸುವ ಶಕ್ತಿ ದೇವಿ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯದಿಂದ ಭಕ್ತರ ದಂಡೇ ಹರಿದು ಬರುತ್ತದೆ. ಜಾತ್ರೆಗೆ ಆಗಮಿಸಿದ ಭಕ್ತರು ಭಕ್ತಿಯಿಂದ ದೇವಿ ದರ್ಶನ ಪಡೆದು ಹರಕೆ ತೀರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net