ಹಾಸ್ಯ ಕಾದಂಬರಿ ರಚನೆ ಕಷ್ಟದ ಸಾಹಿತ್ಯ

ಗುರುಪ್ರಸಾದ ನಗರದಲ್ಲಿರುವ ದತ್ತಮಂದಿರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಗುಂಡೇನಟ್ಟಿ ಮಧುಕರ, ಎಲ್.ಎಸ್.ಶಾಸ್ತ್ರಿ, ಶಿರೀಷ ಜೋಶಿ, ಗುರುನಾಥ ಕುಲಕರ್ಣಿ, ಡಾ.ಜಯಂತ ಕಿತ್ತೂರ ಇತರರಿದ್ದರು.
ಗುರುಪ್ರಸಾದ ನಗರದಲ್ಲಿರುವ ದತ್ತಮಂದಿರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಗುಂಡೇನಟ್ಟಿ ಮಧುಕರ, ಎಲ್.ಎಸ್.ಶಾಸ್ತ್ರಿ, ಶಿರೀಷ ಜೋಶಿ, ಗುರುನಾಥ ಕುಲಕರ್ಣಿ, ಡಾ.ಜಯಂತ ಕಿತ್ತೂರ ಇತರರಿದ್ದರು.
Published on
ಬೆಳಗಾವಿ: ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ರಚನೆ ಕಷ್ಟ. ಅದರಲ್ಲೂ ಹಾಸ್ಯ ಕಾದಂಬರಿ ರಚನೆ ತುಂಬ ಕಷ್ಟದ ಕೆಲಸ. ಆದರೆ, ಬೀಚಿಯವರಿಗೆ ಹಾಸ್ಯ ಕಾದಂಬರಿ ರಚನೆ ನೀರು ಕುಡಿದಷ್ಟೇ ಸರಳವಾಗಿತ್ತು ಎಂದು ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಹೇಳಿದರು
ಇಲ್ಲಿನ ಗುರುಪ್ರಸಾದ ನಗರದಲ್ಲಿರುವ ದತ್ತಮಂದಿರ ಸಭಾಗೃಹದಲ್ಲಿ ಈಚೆಗೆ ರಂಗಸಂಪದ ಸಮಾಸದ ಕಾರ್ಯಕ್ರಮದಲ್ಲಿ ಬೀಚಿಯವರ ಕಾಣದ ಸುಂದರಿ ಕಾದಂಬರಿ ಕುರಿತು ಉಪನ್ಯಾಸ ಹಾಗೂ ಓದುಗರ ಅನಿಸಿಕೆ ಕಾರ್ಯಕ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಮಾತನಾಡಿ, ಬೀಚಿಯವರು ಕಾಣದ ಸುಂದರಿ ಕಾದಂಬರಿಯಲ್ಲಿ ತಮ್ಮ ವಿಚಾರಗಳನ್ನು ಪಾತ್ರಗಳ ಮೂಲಕ ಹೇಳಿಸಿದ್ದಾರೆ ಎಂದರು. ಕಾದಂಬರಿ ಕುರಿತು ಡಾ. ನಿರ್ಮಲಾ ಬಟ್ಟಲ,ಎಚ್.ಎಸ್.ವೆರ್ಣೆಕರ, ಪೂರ್ಣಿಮಾ ಚರಂತಿಮಠ, ಜಿ.ಎಸ್.ಸೋನಾರ, ತಾನಾಜಿ ಅನಿಸಿಕೆ ಹಂಚಿಕೊಂಡರು.
ಶಿರೀಷ ಜೋಶಿ, ಗುರುನಾಥ ಕುಲಕರ್ಣಿ, ಡಾ.ಜಯಂತ ಕಿತ್ತೂರ, ಡಾ.ಪಿ.ಜಿ.ಕೆಂಪಣ್ಣವರ, ಚಂದ್ರಶೇಖರ ನವಲಗುಂದ, ಪದ್ಮಾ ಕುಲಕರ್ಣಿ, ಆನಂದ ಪುರಾಣಿಕ, ವಿನೀತಾ ಗೆಜ್ಜಿ, ವಿಜಯಲಕ್ಷ್ಮೀ ಕುಲಕರ್ಣಿ, ಶ್ವೇತಾ ನರಗುಂದ, ಪಾರ್ವತಿ ಪಿಟಗಿ, ಚಿದಾನಂದ ವಾಳಕೆ, ಮದನ ಕಣಬೂರ, ದಿಲೀಪ ಮಳಗಿ, ನಾರಾಯಣ ಕುಲಕರ್ಣಿ, ಜಿ.ಕೆ. ಕುಲಕರ್ಣಿ, ಪ್ರಸಾದ ಕಾರಜೋಳ, ಡಾ.ಅರವಿಂದ ಕುಲಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net