ಆಸ್ತಿ ನೀಡಲೊಪ್ಪದ ಮಹಿಳೆ ಕೊಲೆ

ಸುಜಾತಾ ಪವಾರ
ಸುಜಾತಾ ಪವಾರ
Published on
ಅಥಣಿ ಗ್ರಾಮೀಣ: ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆ ಆಸ್ತಿ ಲಪಟಾಯಿಸುವ ಪ್ರಯತ್ನ ಕೈಗೂಡದ್ದರಿಂದ ಆಕೆಯನ್ನೇ ಕೊಲೆ ಮಾಡಿದ ಘಟನೆ ಬುಧವಾರ ಸಂಕೋನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಅಥಣಿಯ ಕುಮಾರ ಕಲ್ಲಪ್ಪ ಹವಾಲ್ದಾರ (36) ಕೊಲೆ ಆರೋಪಿ. ಮೂಲತಃ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ ನಿವಾಸಿ, ಹಾಲಿ ಅಥಣಿ ಪಟ್ಟಣದಲ್ಲಿ ವಾಸವಿದ್ದ ಸುಜಾತಾ ತೇಜು ಪವಾರ (34) ಕೊಲೆಗೀಡಾದ ಮಹಿಳೆ.
18 ವರ್ಷದ ಹಿಂದೆ ಹಾರೂಗೇರಿಯ ತೇಜು ಜತೆ ವಿವಾಹವಾಗಿದ್ದ ಮಹಿಳೆ, ಆತನೊಂದಿಗೆ ಹೊಂದಾಣಿಕೆ ಸಾಧ್ಯವಾಗದೇ ಪ್ರತ್ಯೇಕವಾಗಿ ವಾಸವಿದ್ದರು. ಈ ಸಂದರ್ಭದಲ್ಲಿ ಪರಿಚಿತನಾಗಿದ್ದ ಕುಮಾರ, ತನ್ನನ್ನು ಮದುವೆಯಾಗಿ, ಆಸ್ತಿ ತನ್ನ ಹೆಸರಿಗೆ ವರ್ಗಾಯಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದ ಮಹಿಳೆಯನ್ನು ಪುಸಲಾಯಿಸಿ, ಬುಧವಾರ ಬೈಕ್ ಮೂಲಕ ಸಂಕೋನಟ್ಟಿ ಗ್ರಾಪಂ ವ್ಯಾಪ್ತಿಯ ಕಬ್ಬಿನ ಗದ್ದೆಗೆ ಕರೆದೊಯ್ದು ದುಪಟ್ಟಾದಿಂದ ಕತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮೃತಳ ತಾಯಿ ಲೀಲಾವತಿ ಅಥಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐಗಳಾದ ಗಿರಿಮಲ್ಲಪ್ಪ ಉಪ್ಪಾರ, ಮಲ್ಲಿಕಾರ್ಜುನ ತಳವಾರ, ತನಿಖಾ ಸಹಾಯಕ ಗುಂಡುರಾವ್ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net